ಭಾನುವಾರ, ಸೆಪ್ಟೆಂಬರ್ 26, 2021
25 °C

ಜಾವೆಲಿನ್ ಥ್ರೊ ಕೋಚ್‌ ಹಾನ್‌ ಒಪ್ಪಂದ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಜಾವೆಲಿನ್ ಥ್ರೊ ರಾಷ್ಟ್ರೀಯ ಕೋಚ್‌ ಯುವೆ ಹಾನ್‌ ಅವರೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಸೋಮವಾರ ಹೇಳಿದೆ.

ಜರ್ಮನಿಯ ಹಾನ್‌ ಅವರು ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದಿರುವ ಫೆಡರೇಷನ್‌, ಇಬ್ಬರು ವಿದೇಶಿ ತರಬೇತುದಾರರನ್ನು ಶೀಘ್ರವೇ ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಹಾನ್ ಅವರ ಅವಧಿ ಟೋಕಿಯೊ ಒಲಿಂಪಿಕ್ಸ್‌ವರೆಗೂ ಇತ್ತು. ಅವರನ್ನು ಮುಂದುವರಿಸಲು ಎಎಫ್‌ಐ ಬಯಸಲಿಲ್ಲ. 2017ರ ನವೆಂಬರ್‌ನಲ್ಲಿ ಹಾನ್ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಲಾಗಿತ್ತು. ಅವರು ಒಲಿಂಪಿಕ್ಸ್ ಚಾಂಪಿಯನ್‌ ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ ಮತ್ತು ಅನು ರಾಣಿ ಅವರಿಗೆ ತರಬೇತಿ ನೀಡಿದ್ದರು.

ಶ್ರೀಶಂಕರ್ ಕೋಚ್ ವಜಾ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾದ ಲಾಂಗ್ ಜಂಪ್ ಪಟು ಎಂ. ಶ್ರೀಶಂಕರ್ ಕೋಚ್‌, ಅವರ ತಂದೆ ಎಸ್‌. ಮುರಳಿ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವುದಾಗಿ ಎಎಫ್‌ಐ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು