ಬುಧವಾರ, ಜೂನ್ 23, 2021
26 °C

ಈಜು ಕೋಚ್‌ಗಳ ಸಮ್ಮೇಳನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಳಮಟ್ಟದಲ್ಲಿ ಈಜು ಕ್ರೀಡೆಯ ಅಭಿವೃದ್ಧಿಯ ಉದ್ದೇಶದಿಂದ ಕರ್ನಾಟಕ ಈಜು ಸಂಸ್ಥೆಯು (ಕೆಎಸ್‌ಎ) ಈಜು ತರಬೇತುದಾರರು ಮತ್ತು ಶಿಕ್ಷಕರ ಸಮ್ಮೇಳನವನ್ನು ನಗರದಲ್ಲಿ ಇದೇ 11 ಮತ್ತು 12ರಂದು ಹಮ್ಮಿಕೊಂಡಿದೆ. ದೇಶದಾದ್ಯಂತ 80 ಮಂದಿ ತರಬೇತುದಾರರು ಪಾಲ್ಗೊಳ್ಳಲಿದ್ದಾರೆ.

ರೇಸ್‌ಕೋರ್ಸ್‌ ರಸ್ತೆಯ ಸಿಟಡೆಲ್‌ ಹೋಟೆಲ್‌ನಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನವನ್ನು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಸಿ.ಟಿ. ರವಿ ಉದ್ಘಾಟಿಸುವರು.

ಸಮ್ಮೇಳನದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್‌ ನಿಹಾರ್ ಅಮೀನ್‌ ಅವರು ‘ಭಾರತೀಯ ಈಜುಕ್ಷೇತ್ರದಲ್ಲಿ ಭವಿಷ್ಯದ ಹಾದಿ’ ಬಗ್ಗೆ ಮಾತನಾಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು