ಸೋಮವಾರ, ಆಗಸ್ಟ್ 15, 2022
20 °C

ಟೆನ್‌ಪಿನ್ ಬೌಲಿಂಗ್‌: ಮುನ್ನಡೆಯಲ್ಲಿ ಕಿಶನ್‌, ಪ್ರೀಮಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಾಲಿ ಚಾಂಪಿಯನ್‌ ಕಿಶನ್ ಆರ್‌ ಹಾಗೂ ಪ್ರೀಮಲ್‌ ಜೋವಾನ್ ಅವರು ರಾಜ್ಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಅಂತ್ಯದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಮುನ್ನಡೆ ಗಳಿಸಿದರು.

ಇಲ್ಲಿಯ ಚರ್ಚ್‌ಸ್ಟ್ರೀಟ್‌ ಅಮೀಬಾದಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ವಿಭಾಗದಲ್ಲಿ ಕಿಶನ್ ಒಟ್ಟು 3533 ಪಾಯಿಂಟ್ಸ್ ಕಲೆಹಾಕಿದರು. ಆಕಾಶ್ ಅಶೋಕ್‌ ಕುಮಾರ್ (3514) ಹಾಗೂ ಸಲ್ಮಾನ್ ಖಾನ್‌ (3459) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಪ್ರೀಮಲ್‌ ಜೋವಾನ್ ಒಟ್ಟು 3013 ಪಾಯಿಂಟ್ಸ್ ಹೊಂದಿದ್ದಾರೆ. ಗೀತಾ ಪೂಜಾರಿ (2977) ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು