ಶುಕ್ರವಾರ, ಮೇ 20, 2022
23 °C

ಡ್ಯಾನಿಶ್‌ ಈಜುಕೂಟ: ನಟ ಮಾಧವನ್ ಪುತ್ರ ವೇದಾಂತ್‌ಗೆ ಚಿನ್ನ, ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್ ಈಜುಕೂಟದಲ್ಲಿ ಖ್ಯಾತ ನಟ ಆರ್‌. ಮಾಧವನ್ ಪುತ್ರ ವೇದಾಂತ್‌ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

800 ಮೀಟರ್ಸ್‌ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ 16 ವರ್ಷದ ವೇದಾಂತ್‌ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದರು.

800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಹಾಗೇ 1500 ಮೀಟರ್ಸ್ ಗುರಿಯನ್ನು 15 ನಿಮಿಷ 57.86 ಸೆಕೆಂಡುಗಳಲ್ಲಿ ತಲುಪುವ ಮೂಲಕ ಬೆಳ್ಳಿ ಗೆದ್ದರು.

2021ರ ಮಾರ್ಚ್‌ನಲ್ಲಿ ನಡೆದಿದ್ದ ಲಾತ್ವಿಯಾ ಓಪನ್‌ನಲ್ಲಿ ಕಂಚು ಗೆದ್ದಿದ್ದರು. ಅದೇ ವರ್ಷ ನಡೆದ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲೂ ಏಳು ಪದಕಗಳು ಅವರ ಕೊರಳಿಗೇರಿದ್ದವು.

ಓದನ್ನೂ ಓದಿ: 

ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಮಾದವನ್ ಸಾಮಾಜಿಕ ಮಾಧ್ಯಮಗಳಲ್ಲಿ ವೇದಾಂತ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. 

ಓದನ್ನೂ ಓದಿ:  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು