ಶುಕ್ರವಾರ, ಮಾರ್ಚ್ 31, 2023
22 °C
ರಿಲೆಯಲ್ಲಿ ಕರಾವಳಿ ಮಹಿಳೆಯರ ಪಾರಮ್ಯ

ಅಥ್ಲೆಟಿಕ್ಸ್‌: ಮಂಗಳೂರು ವಿವಿ ಚಾಂಪಿಯನ್, ಡಬಲ್ ಪದಕ ಸಾಧನೆ ಮಾಡಿದ ಸ್ನೇಹಾ, ಪೂನಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಚೆನ್ನೈನಲ್ಲಿರುವ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದಲ್ಲಿ ನಡೆದ ನೈರುತ್ಯ ವಲಯ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್‌ ಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಸಮಗ್ರ ಚಾಂಪಿಯನ್ ಆಗಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳ ಚಾಂಪಿಯನ್ ಪಟ್ಟವೂ ಮಂಗಳೂರು ವಿವಿ ಪಾಲಾಗಿದೆ.

176 ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದ ಕೂಟದಲ್ಲಿ ಮಂಗಳೂರು ವಿವಿ ಪುರುಷರು 90 ಮತ್ತು ಮಹಿಳೆಯರು 96 ಪಾಯಿಂಟ್ಸ್ ಕಲೆ ಹಾಕಿದ್ದಾರೆ. 9 ಚಿನ್ನ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳು ವಿವಿಗೆ ಲಭಿಸಿವೆ. ಈ ಪೈಕಿ ಪುರುಷರು 6 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಕೇರಳದ ಕೋಟಯಂನ ಮಹಾತ್ಮ ಗಾಂಧಿ ವಿವಿ 114 ಪಾಯಿಂಟ್‌ಗಳೊಂದಿಗೆ ರನ್ನರ್ ಅಪ್ ಸ್ಥಾನ ಗಳಿಸಿದೆ. ಪುರುಷರ ವಿಭಾಗದಲ್ಲಿ ಕೊಲ್ಲಾಪುರದ ಶಿವಾಜಿ ವಿವಿ (65 ಪಾಯಿಂಟ್‌) ಮತ್ತು ಮಹಿಳೆಯರ ವಿಭಾಗದಲ್ಲಿ ಕೋಟಯಂನ ಮಹಾತ್ಮ ಗಾಂಧಿ ವಿವಿ (63 ಪಾಯಿಂಟ್‌) ರನ್ನರ್ ಅಪ್‌ ಆದವು.    

ಪುರುಷರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಹರೀಶ್‌ 5000 ಮೀಟರ್ಸ್ ಮತ್ತು 10000 ಮೀಟರ್ಸ್ ಓಟದಲ್ಲಿ ಚಿನ್ನ, ಹರದೀಪ್ 20 ಕಿಮೀ ವೇಗ ನಡಿಗೆಯಲ್ಲಿ ಚಿನ್ನ, ಉಪೇಂದ್ರ ಬಲಿಯಾನ್ ಹಾಫ್ ಮ್ಯಾರಥಾನ್‌ನಲ್ಲಿ ಚಿನ್ನ, ರಿತೇಶ್‌ ಓಹರೆ 1500 ಮೀ ಓಟದಲ್ಲಿ ಚಿನ್ನ, ಸಚಿನ್ ಯಾದವ್‌ ಜಾವೆಲಿನ್ ಥ್ರೋದಲ್ಲಿ ಬೆಳ್ಳಿ, ಅರ್ಮೋಲ್‌ ಟಿ ಹೈಜಂಪ್‌ನಲ್ಲಿ ಬೆಳ್ಳಿ, ಸ್ಟಾಲಿನ್‌ ಡೆಕಾಥ್ಲಾನ್‌ನಲ್ಲಿ ಬೆಳ್ಳಿ, ನಿತಿನ್ ಮಲಿಕ್ ಹ್ಯಾಮರ್‌ ಥ್ರೋದಲ್ಲಿ ಬೆಳ್ಳಿ, ಆಶಿಶ್‌ ಕುಮಾರ್‌ ಶಾಟ್‌ಪಟ್‌ನಲ್ಲಿ ಕಂಚು, ಉಜ್ವಲ್ ಡಿಸ್ಕಸ್‌ ಥ್ರೋದಲ್ಲಿ ಕಂಚು, ಉಡುಪಿ  ಪಿ.ಡಿ.ಶೆಟ್ಟಿ ಕಾಲೇಜಿನ ಅಖಿಲೇಶ್‌ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ವಾಮದಪದವು ಕಾಲೇಜಿನ ನವೀನ್ ಎಸ್.ಪಾಟೀಲ ಹಾಫ್ ಮ್ಯಾರಥಾನ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಸ್ನೇಹಾ ಎಸ್‌.ಎಸ್‌ 100 ಮೀಟರ್ ಓಟದಲ್ಲಿ ಚಿನ್ನ, 200 ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಕೆವಿನಾ ಅಶ್ವಿನಿ ಹೈಜಂಪ್‌ನಲ್ಲಿ ಚಿನ್ನ, ಪೂನಂ 5000 ಮೀ ಓಟದಲ್ಲಿ ಬೆಳ್ಳಿ, 10000 ಮೀ ಓಟದಲ್ಲಿ ಕಂಚಿನ ಪದಕ, ಅಂಜಲಿ 100 ಮೀ ಹರ್ಡಲ್ಸ್‌ನಲ್ಲಿ ಬೆಳ್ಳಿ, ಶ್ರುತಿಲಕ್ಷ್ಮಿ ಲಾಂಗ್‌ಜಂಪ್‌ನಲ್ಲಿ ಬೆಳ್ಳಿ, ಸ್ನೇಹಲತಾ 1500 ಮೀ ಓಟದಲ್ಲಿ ಬೆಳ್ಳಿ, ಅರ್ಪಿತಾ 800 ಮೀ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

4x100 ಮೀ ರಿಲೆಯಲ್ಲಿ ಆಳ್ವಾಸ್ ಕಾಲೇಜಿನ ಸ್ನೇಹಾ ಎಸ್‌.ಎಸ್‌, ನವಮಿ ಎಚ್‌.ಆರ್‌, ಎಸ್‌ಡಿಎಂ ಬಿಬಿಎಂ ಕಾಲೇಜಿನ ವರ್ಷಾ ಮತ್ತು ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಕೀರ್ತನಾ ಅವರನ್ನು ಒಳಗೊಂಡ ತಂಡ ಚಿನ್ನ ಗೆದ್ದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು