ಶುಕ್ರವಾರ, ಮೇ 29, 2020
27 °C
ಭುವನೇಶ್ವರದಲ್ಲಿ 20 ಮತ್ತು 21ರಂದು ಪಂದ್ಯ

ಪ್ರೊ ಲೀಗ್‌: ಆಸ್ಟ್ರೇಲಿಯಾ ವಿರುದ್ಧ ಪಂದ್ಯಕ್ಕೆ ಮನ್‌ಪ್ರೀತ್‌ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಸ್ಟ್ರೇಲಿಯಾ ತಂಡದ ವಿರುದ್ಧ ಭುವನೇಶ್ವರದಲ್ಲಿ ಇದೇ ತಿಂಗಳ 20 ಮತ್ತು 21ರಂದು ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳಲ್ಲಿ ಆಡಲಿರುವ ಭಾರತ ತಂಡಕ್ಕೆ ಮನ್‌ಪ್ರೀತ್‌ ಸಿಂಗ್ ನಾಯಕರಾಗಿದ್ದಾರೆ.

ಹಾಕಿ ಇಂಡಿಯಾ ಮಂಗಳವಾರ 24 ಆಟಗಾರರ ತಂಡವನ್ನು  ಪ್ರಕಟಿಸಿದ್ದು, ಹರ್ಮನ್‌ಪ್ರೀತ್‌ ಸಿಂಗ್‌ ಉಪನಾಯಕರಾಗಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ.

ವಿಶ್ವದ ಅಗ್ರಮಾನ್ಯ ತಂಡ ಬೆಲ್ಜಿಯಂ ವಿರುದ್ಧ ಇತ್ತೀಚೆಗೆ ನಡೆದ ಪ್ರೊ ಲೀಗ್‌ ಪಂದ್ಯದಲ್ಲಿ ಮೊದಲನೆಯದನ್ನು ಭಾರತ 2–1 ರಿಂದ ಗೆದ್ದುಕೊಂಡಿತ್ತು. ಆದರೆ ಮರುಪಂದ್ಯದಲ್ಲಿ ಬೆಲ್ಜಿಯಂ 3–2ರಿಂದ ಜಯಿಸಿತ್ತು. ಭಾರತ ಇತ್ತೀಚಿನ ಸಾಧನೆಯಿಂದ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಈಗ ನಾಲ್ಕನೇ ಸ್ಥಾನಕ್ಕೇರಿದೆ.

‘ವಿಶ್ವ ಚಾಂಪಿಯನ್‌ ತಂಡದ ಎದುರು ಎರಡು ಪ್ರಬಲ ಪಂದ್ಯಗಳ ನಂತರ, ಈಗ ಆಸ್ಟ್ರೇಲಿಯಾದಂಥ ಮತ್ತೊಂದು ಬಲಿಷ್ಠ ತಂಡವನ್ನು ಎದುರಿಸುತ್ತಿದ್ದೇವೆ. ನಮ್ಮ ತಂಡವೂ ಪ್ರಬಲವಾಗಿದ್ದು ಸಮತೋಲನ ಹೊಂದಿದೆ’ ಎಂದು ಚೀಫ್‌ ಕೋಚ್‌ ಗ್ರಹಾಂ ರೀಡ್‌ ಹೇಳಿದರು.

ಭಾರತ ತಂಡ: ಪಿ.ಆರ್‌.ಶ್ರೀಜೇಶ್‌, ಕೃಷನ್‌ ಪಾಠಕ್‌, ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ಬಿರೇಂದ್ರ ಲಾಕ್ರಾ, ಹರ್ಮನ್‌ಪ್ರೀತ್‌ ಸಿಂಗ್‌ (ಉಪನಾಯಕ), ವರುಣ್‌ ಕುಮಾರ್‌, ಗುರಿಂದರ್‌ ಸಿಂಗ್‌, ರೂಪಿಂದರ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ), ವಿವೇಕ್‌ ಸಾಗರ್‌ ಪ್ರಸಾದ್, ಹಾರ್ದಿಕ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ರಾಜಕುಮಾರ್‌ ಪಾಲ್‌, ಆಕಾಶದೀಪ್‌ ಸಿಂಗ್‌, ಸುಮಿತ್‌, ಲಲಿತ್‌ ಉಪಾಧ್ಯಾಯ, ಗುರುಸಾಹಿಬ್‌ಜಿತ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಎಸ್‌.ವಿ.ಸುನೀಲ್‌, ಜರ್ಮನ್‌ಪ್ರೀತ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್, ನೀಲಕಂಠ ಶರ್ಮಾ, ರಮಣದೀಪ್‌ ಸಿಂಗ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು