ಶನಿವಾರ, ಡಿಸೆಂಬರ್ 7, 2019
25 °C
10 ಮಂದಿ ಅಥ್ಲೀಟ್‌ ರಾಯಭಾರಿಗಳ ಆಯ್ಕೆ

ಟೋಕಿಯೊ ಒಲಿಂಪಿಕ್ಸ್‌ | ಮೇರಿ ಕೋಮ್‌ ಐಒಸಿ ಬಾಕ್ಸಿಂಗ್‌ ರಾಯಭಾರಿ

Published:
Updated:

ನವದೆಹಲಿ: ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಬಾಕ್ಸರ್‌ಗಳನ್ನು ಪ್ರತಿನಿಧಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಕಾರ್ಯಪಡೆ ಆಯ್ಕೆ ಮಾಡಿರುವ 10 ಮಂದಿ ಅಥ್ಲೀಟ್‌ ರಾಯಭಾರಿಗಳಲ್ಲಿ ಭಾರತದ ಎಂ.ಸಿ. ಮೇರಿ ಕೋಮ್‌ ಒಳಗೊಂಡಿದ್ದಾರೆ.

ಆರು ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಮೇರಿ ಸಾಧನೆ ಗುರುತಿಸಿ ಈ ಗೌರವ ನೀಡಲಾಗಿದೆ. ಹತ್ತು ಮಂದಿಯಲ್ಲಿ ಐವರು ಪುರುಷರು ಮತ್ತು ಐವರು ಮಹಿಳಾ ಬಾಕ್ಸರ್‌ಗಳಾಗಿದ್ದಾರೆ. ಮೇರಿ ಅವರು ಏಷ್ಯ ವಲಯ ಪ್ರತಿನಿಧಿಸಲಿದ್ದಾರೆ.

ಉಕ್ರೇನ್‌ನ ದಂತಕತೆ ಔಆಸಿಲ್‌ ಲಮಚೆಂಕೊ ಅವರು ಯುರೋಪ್‌ ವಲಯ ಪ್ರತಿನಿಧಿಸುವರು. ಲಮಚೆಂಕೊ ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ಆಗಿದ್ದು, ಒಮ್ಮೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಅಮೆರಿಕ ವಲಯವನ್ನು ಐದು ಬಾರಿಯ ವಿಶ್ವ ಚಾಂಪಿಯನ್‌ ಹಾಗೂ ರಿಯೊ ಒಲಿಂಪಿಕ್ಸ್ ಚಿನ್ನ ವಿಜೇತ ಜುಲಿಯೊ ಸಿಸರ್‌ ಲಾ ಕ್ರೂಜ್‌ ಪ್ರತಿನಿಧಿಸುವರು.

‘ಇದು ನನಗೊಲಿದ ದೊಡ್ಡ ಗೌರವ. ಜೊತೆಗೆ ದೊಡ್ಡ ಜವಾಬ್ದಾರಿ ಕೂಡ. ನಾನು ಸಹ ಅಥ್ಲೀಟುಗಳ ನೆರವಿಗಾಗಿ ಶ್ರಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಂದಿನಂತೆ ನನ್ನಿಂದಾದಷ್ಟು ಉತ್ತಮ ಕೆಲಸ ಮಾಡುತ್ತೇನೆ’ ಎಂದು ರಾಜ್ಯಸಭಾ ಸದಸ್ಯೆ ಕೂಡ ಆಗಿರುವ 36 ವರ್ಷದ ಮೇರಿ ಕೋಮ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು