ಸೋಮವಾರ, ಸೆಪ್ಟೆಂಬರ್ 20, 2021
21 °C

ಸಚಿನ್ ಮಾತುಗಳು ಸ್ಫೂರ್ತಿದಾಯಕ: ಮೀರಾಬಾಯಿ ಚಾನು

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Mirabai Chanu Instagram

ಬೆಂಗಳೂರು: ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮುಂಬೈಗೆ ತೆರಳಿದ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಅದರ ಜತೆಗೆ, ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರನ್ನು ಕೂಡ ಭೇಟಿಯಾಗಿದ್ದಾರೆ.

ಸಚಿನ್ ಜತೆ ಭೇಟಿಯ ನೆನಪುಗಳನ್ನು ಒಲಿಂಪಿಕ್ಸ್ ತಾರೆ ಮೀರಾಬಾಯಿ ಹಂಚಿಕೊಂಡಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಬೇಕೆಂಬ ಉತ್ಕಟ ಆಸೆ ಹೊಂದಿದ್ದ ಮೀರಾಬಾಯಿ, ಕ್ರಿಕೆಟ್ ದಿಗ್ಗಜ ಸಚಿನ್ ಅವರನ್ನು ಕೂಡ ಭೇಟಿಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಅವರ ಜ್ಞಾನ ಮತ್ತು ಮಾತುಗಳು ನಿಜಕ್ಕೂ ಸ್ಪೂರ್ತಿದಾಯಕ. ಅವು ಯಾವತ್ತೂ ನಮ್ಮೊಂದಿಗಿರುತ್ತದೆ. ನಿಜಕ್ಕೂ ಸಚಿನ್ ಅವರನ್ನು ಭೇಟಿಯಾದ ಕ್ಷಣ ಖುಷಿ ಕೊಟ್ಟಿದೆ ಎಂದು ಮೀರಾಬಾಯಿ ಚಾನು ಹೇಳಿಕೊಂಡಿದ್ದಾರೆ.

ಸಚಿನ್ ಮತ್ತು ಮೀರಾ ಭೇಟಿಯ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು