ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್ | ಸೌಲಭ್ಯ ನಿರ್ಮಾಣ ಬಹುತೇಕ ಪೂರ್ಣ

Last Updated 12 ಜೂನ್ 2020, 14:48 IST
ಅಕ್ಷರ ಗಾತ್ರ

ಟೋಕಿಯೊ: ಮುಂದಿನ ವರ್ಷಕ್ಕೆ ಮುಂದೂಡಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಅಗತ್ಯವಿರುವ ಕ್ರೀಡಾಂಗಣ ಮತ್ತು ಇತರ ಸೌಲಭ್ಯಗಳ ಪೈಕಿ ಶೇಕಡಾ 80ರಷ್ಟನ್ನು ಈಗಾಗಲೇ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ ಎಂದು ಆಯೋಜನಾ ಸಮಿತಿ ತಿಳಿಸಿದೆ.

ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥ ಯೋಶಿರೊ ಮೊರಿ ‘ಅತಿದೊಡ್ಡ ಕ್ರೀಡಾಂಗಣಗಳ ಪೈಕಿ ಎರಡನ್ನು ಪಡೆದುಕೊಳ್ಳುವ ಪ್ರಕ್ರಿಯೆ ಬಾಕಿ ಇದ್ದು ಉಳಿದವುಗಳನ್ನು ಬಳಸಿಕೊಳ್ಳಲು ಅನುಮತಿ ಲಭಿಸಿದೆ’ ಎಂದರು.

ಆಯೋಜನಾ ಸಮಿತಿಯವರು ಐದು ಸಾವಿರ ವಸತಿ ಸಂಕೀರ್ಣಗಳ ಕ್ರೀಡಾ ಗ್ರಾಮದಲ್ಲಿ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿದ್ದು ಸಾಕಷ್ಟು ಕೆಲಸ ಬಾಕಿ ಉಳಿದಿದೆ. ‘ಕ್ರೀಡಾ ಗ್ರಾಮವು ಸದ್ಯ ದೊಡ್ಡ ಸಮಸ್ಯೆಯಾಗಿ ಉಳಿದಿದೆ’ ಎಂದು ಕ್ರೀಡಾಕೂಟದ ಆಪರೇಟಿಂಗ್ ನಿರ್ದೇಶಕ ಪಿರಿ ಡುಕ್ರಿ ಒಪ್ಪಿಕೊಂಡಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ಕ್ರೀಡಾಕೂಟವನ್ನು ಮುಂದೂಡಿದ್ದರಿಂದ ಆಗಿರುವ ನಷ್ಟವನ್ನು ಸರಿದೂಗಿಸುವುದಕ್ಕಾಗಿ ಕ್ರೀಡಾಕೂಟವನ್ನು ಸರಳವಾಗಿ ನಡೆಸಬೇಕಾದೀತು ಎಂದು ಕೆಲವು ವಾರಗಳ ಹಿಂದೆ ಆಯೋಜಕರು ಹೇಳಿದ್ದರು. ಆದರೆ ಯೊಶಿರೊ ಮೊರಿಯಾಗಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೋಶಿರೊ ಮೊಟೊ ಆಗಲಿ ಈ ಬಗ್ಗೆ ಶುಕ್ರವಾರ ಏನನ್ನೂ ಹೇಳಲಿಲ್ಲ. ತಡವಾದ್ದರಿಂದ ಆಗಬಹುದಾದ ನಷ್ಟದ ಪ್ರಮಾಣದ ಬಗ್ಗೆಯೂ ಅವರು ಸ್ಪಷ್ಟಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT