ಮಂಗಳವಾರ, ಸೆಪ್ಟೆಂಬರ್ 28, 2021
24 °C

ಫಾರ್ಮುಲಾ ಒನ್‌: ಹ್ಯಾಮಿಲ್ಟನ್‌ಗೆ ಪ್ರಶಸ್ತಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡಿರುವ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಈ ಋತುವಿನ ಕೊನೆಯ ಫಾರ್ಮುಲಾ ಒನ್‌ ರೇಸ್‌ ಅಬುಧಾಬಿ ಗ್ರ್ಯಾನ್‌ ಪ್ರಿಯಲ್ಲೂ ಪಾರಮ್ಯ ಮೆರೆದಿದ್ದಾರೆ.

ಭಾನುವಾರ ನಡೆದ ರೇಸ್‌ನಲ್ಲಿ ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌ ಅವರು ಚಾಂಪಿಯನ್‌ ಆದರು. ಒಂದು ಗಂಟೆ 34 ನಿಮಿಷ 05.715 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದ ಅವರು ಇದರೊಂದಿಗೆ ಈ ಋತುವಿನಲ್ಲಿ ಒಟ್ಟು 11 ಟ್ರೋಫಿಗಳನ್ನು ಗೆದ್ದ ಸಾಧನೆ ಮಾಡಿದರು.

ಹ್ಯಾಮಿಲ್ಟನ್‌ ಅವರು ಫಾರ್ಮುಲಾ ಒನ್‌ನಲ್ಲಿ ಭಾಗವಹಿಸಿದ 250ನೇ ರೇಸ್‌ ಇದಾಗಿತ್ತು.  ಅವರು ವೃತ್ತಿಬದುಕಿನಲ್ಲಿ ಜಯಿಸಿದ 84ರಲ್ಲಿ ಪ್ರಶಸ್ತಿ ಇದಾಗಿದೆ. ಯಾಸ್‌ ಮರಿನಾ ಸರ್ಕ್ಯೂಟ್‌ನಲ್ಲಿ ಅವರು ಜಯಿಸಿದ ಐದನೇ ಟ್ರೋಫಿ ಇದು.

ರೆಡ್‌ಬುಲ್‌ ತಂಡದ ಮ್ಯಾಕ್ಸ್‌ ವರ್ಸ್ಟಾಪನ್‌ ರನ್ನರ್ ಅಪ್‌ ಆದರು. ಫೆರಾರಿ ತಂಡದ ಚಾರ್ಲಸ್‌ ಲೆಕ್ಲರ್ಕ್‌ ಮೂರನೇಯವರಾಗಿ ಗುರಿ ಕ್ರಮಿಸಿದರು.

ಮರ್ಸಿಡೀಸ್‌ ತಂಡದ ವಲಟ್ಟೆರಿ ಬೊಟ್ಟಾಸ್‌ ಮತ್ತು ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು