ಶುಕ್ರವಾರ, ಜೂಲೈ 3, 2020
21 °C

ಕ್ರೀಡಾ ಪ್ರಶಸ್ತಿ: ನಾಮನಿರ್ದೇಶನ ದಿನಾಂಕ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವ ದಿನಾಂಕವನ್ನು ಕೇಂದ್ರ ಕ್ರೀಡಾ ಸಚಿವಾಲಯ ಜೂನ್ 22ರ ವರೆಗೆ ವಿಸ್ತರಿಸಿದೆ. ಕೊರೊನಾ ಹಾವಳಿಯಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ಕ್ರೀಡಾಪಟುಗಳು ಸ್ವಯಂ ನಾಮನಿರ್ದೇಶನ ಮಾಡುವ ಅವಕಾಶವನ್ನೂ ನೀಡಲಾಗಿದೆ. ಈ ಹಿಂದೆ ತಿಳಿಸಿದಂತೆ ಬುಧವಾರ ಕೊನೆಯ ದಿನವಾಗಿತ್ತು.

ಈ ವರ್ಷ ಇ–ಮೇಲ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಿದರೆ ಸಾಕು ಎಂದು ಸಚಿವಾಲಯ ತಿಳಿಸಿತ್ತು. ರಾಷ್ಟ್ರೀಯ ಫೆಡರೇಷನ್‌, ಕ್ರೀಡಾಮಂಡಳಿ ಮತ್ತು ಈ ಹಿಂದೆ ಪ್ರಶಸ್ತಿ ಪಡೆದವರು ಹೆಸರು ಶಿಫಾರಸು ಮಾಡಲು ಅವಕಾಶವಿತ್ತು. ಆದರೆ ಈವರೆಗೆ ಪಟ್ಟಿಯಲ್ಲಿ ಹೆಸರು ಗಳಿಸಲು ಸಾಧ್ಯವಾಗದವರು ಸ್ವಯಂ ಹೆಸರು ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು