ಬುಧವಾರ, ಜನವರಿ 29, 2020
24 °C
ರಾಜ್ಯಮಟ್ಟದ ಸಬ್‌ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌

ನೆಟ್‌ಬಾಲ್‌: ದಕ್ಷಿಣ ಕನ್ನಡ ತಂಡಕ್ಕೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಬೆಂಗಳೂರಿನ ಬಸವೇಶ್ವರ ಹೈಸ್ಕೂಲ್‌ ತಂಡಗಳು ರಾಜ್ಯಮಟ್ಟದ ಸಬ್‌ಜೂನಿಯರ್‌ ನೆಟ್‌ಬಾಲ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡವು. ಬೆಂಗಳೂರು ನೆಟ್‌ಬಾಲ್‌ ಸಂಸ್ಥೆಯು ಟೂರ್ನಿಯನ್ನು ಆಯೋಜಿಸಿತ್ತು.

ಇಲ್ಲಿಯ ಮಲ್ಲೇಶ್ವರದ ಕೆಂಪೇಗೌಡ ಕ್ರೀಡಾಂಗಣದಲ್ಲಿ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು ಬಸವೇಶ್ವರ ಹೈಸ್ಕೂಲ್‌ ಬೆಂಗಳೂರು ತಂಡದ ಎದುರು 16–10 ಅಂಕಗಳಿಂದ ಗೆದ್ದಿತು. ಮೂರನೆಯ ಸ್ಥಾನವನ್ನು ಚಿಕ್ಕೋಡಿ ತಂಡ ತನ್ನದಾಗಿಸಿಕೊಂಡಿತು.

ಬಾಲಕಿಯರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಬಸವೇಶ್ವರ ಹೈಸ್ಕೂಲ್‌ ತಂಡವು ಮಾರುತಿ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ ಎದುರು 16–10ರಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು. ಮೂರನೇ ಸ್ಥಾನವನ್ನು ಬೆಂಗಳೂರಿನ ಚಾಣಕ್ಯ ಪಬ್ಲಿಕ್‌ ಸ್ಕೂಲ್‌ ಗಳಿಸಿತು.

ಟೂರ್ನಿಯಲ್ಲಿ ಬಾಲಕರ 16 ಹಾಗೂ ಬಾಲಕಿಯರ 10 ತಂಡಗಳು ಭಾಗವಹಿಸಿದ್ದವು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು