ಮಂಗಳವಾರ, ಸೆಪ್ಟೆಂಬರ್ 28, 2021
22 °C

ಟೋಕಿಯೊ ಒಲಿಂಪಿಕ್ಸ್ ಸಂಬಂಧಿತ ಪ್ರಚಾರಾಭಿಯಾನದಿಂದ ಹಿಂದೆ ಸರಿದ ಟೊಯೊಟಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಟೋಕಿಯೊ: ಜಪಾನ್‌ನಲ್ಲಿ ಒಲಿಂಪಿಕ್ಸ್‌ ಸಂಬಂಧಿತ ಪ್ರಚಾರಾಭಿಯಾನ ನಡೆಸುವ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ಒಲಿಂಪಿಕ್ಸ್‌ ಪ್ರಾಯೋಜಕತ್ವ ವಹಿಸಿಕೊಂಡಿರುವ ಟೊಯೊಟಾ ಕಂಪನಿ ಹೇಳಿದೆ. ಜತೆಗೆ, ಉದ್ಘಾಟನಾ ಸಮಾರಂಭಕ್ಕೆ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದೂ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣ ಮುಂದೂಡಿಕೆಯಾಗಿರುವ ಕ್ರೀಡಾಕೂಟಕ್ಕೆ ಭಾರಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಕಂಪನಿ ಈ ನಿರ್ಧಾರ ಪ್ರಕಟಿಸಿದೆ.

ಓದಿ: 

ಟೊಯೊಟಾವು ಒಲಿಂಪಿಕ್ಸ್‌ನ ಪ್ರಮುಖ ಪ್ರಾಯೋಜಕ ಕಂಪನಿಯಾಗಿದೆ. ಜಪಾನ್‌ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವುದರಿಂದ ಜನ ಬೆಂಬಲ ಪಡೆಯಲು ಕಂಪನಿ ಹೆಣಗಾಡುತ್ತಿದೆ ಎನ್ನಲಾಗಿದೆ.

ಸದ್ಯದ ಸನ್ನಿವೇಶದಲ್ಲಿ ಪ್ರಚಾರಾಭಿಯಾನ ನಡೆಸುವುದು ಅಸಾಧ್ಯ. ಹೀಗಾಗಿ ಅಭಿಯಾನ ನಡೆಸುವ ಯೋಜನೆ ಕೈಬಿಡಲಾಗಿದೆ ಎಂದು ಕಂಪನಿಯ ವಕ್ತಾರೆ ಶಿಯೊರಿ ಹಾಶಿಮೊಟೊ ಹೇಳಿದ್ದಾರೆ.

ಈ ನಿರ್ಧಾರ ಕೈಗೊಳ್ಳಲು ನಿಖರ ಕಾರಣವೇನು ಮತ್ತು ಯಾವಾಗ ತೀರ್ಮಾನ ಕೈಗೊಳ್ಳಲಾಯಿತು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.

ಓದಿ: 

ಈ ಬಾರಿ ಕೋವಿಡ್ ಕಾರಣ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿಲ್ಲ. ಪ್ರಾಯೋಜಕತ್ವ ವಹಿಸಿಕೊಂಡವರೂ ಸೇರಿದಂತೆ ಸಾವಿರ ಮಂದಿ ಮೀರದಂತೆ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು