ಮಂಗಳವಾರ, ಸೆಪ್ಟೆಂಬರ್ 21, 2021
21 °C

ಆರ್ಟಿಸ್ಟಿಕ್ಸ್ ಜಿಮ್ನಾಸ್ಟಿಕ್ಸ್: ಸಿಮೋನ್ ಬೈಲ್ಸ್ ಬಳಗಕ್ಕೆ ರಷ್ಯಾ ಸವಾಲು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಒಲಿಂಪಿಕ್ಸ್ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿರುವ ಸಿಮೋನ್ ಬೈಲ್ಸ್ ಅವರನ್ನೊಳಗೊಂಡ ಅಮೆರಿಕ ಮಹಿಳಾ ಜಿಮ್ನಾಸಿಕ್ಸ್ ತಂಡವು ಮಂಗಳವಾರ ರಷ್ಯಾ ಸವಾಲಿಗೆ ಸಜ್ಜಾಗಿದೆ.

ಮಹಿಳಾ ತಂಡ ವಿಭಾಗದ ಫೈನಲ್ ಮಂಗಳವಾರ ನಿಗದಿಯಾಗಿದೆ.

2011ರ ಬಳಿಕ ನಡೆದ ಎಲ್ಲ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಒಲಿಂಪಿಕ್ಸ್‌ಗಳಲ್ಲಿ ಅಮೆರಿಕವು ತಂಡ ವಿಭಾಗಗಳಲ್ಲಿ ಪಾರಮ್ಯ ಮೆರೆದಿದೆ. ಆದರೆ ಭಾನುವಾರ ನಡೆದ ಅರ್ಹತಾ ಸುತ್ತುಗಳಲ್ಲಿ ಆ ದೇಶದ ಮಹಿಳೆಯರಿಗೆ ರಷ್ಯಾ ಸ್ಪರ್ಧಿಗಳು ಕಠಿಣ ಪೈಪೋಟಿ ಒಡ್ಡಿದ್ದರು. ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಗಳನ್ನು ಗಳಿಸಿದ್ದರು.

ರಷ್ಯಾದ ಸ್ಪರ್ಧಿಗಳು ಈ ಬಾರಿ ರಷ್ಯನ್ ಒಲಿಂಪಿಕ್ಸ್ ಸಮಿತಿ ಹೆಸರಿನಲ್ಲಿ ಭಾಗವಹಿಸಿದ್ದಾರೆ. ಆ ತಂಡದಲ್ಲಿ ಆ್ಯಂಜೆಲಿನಾ ಮೆಲ್ನಿಕೊವಾ, 16 ವರ್ಷ ವಯಸ್ಸಿನ ವ್ಲಾಡಿಸ್ಲಾವಾ ಯುರಜೊವಾ ಮತ್ತು ವಿಕ್ಟೊರಿಯಾ ಲಿಸ್ತುನೊವಾ ಇದ್ದಾರೆ.

ಅಮೆರಿಕ ತಂಡದಲ್ಲಿ ಸಿಮೋನ್ ಬೈಲ್ಸ್ ಜೊತೆಗೆ ಸುನೀಸಾ ಲೀ, ಜೋರ್ಡಾನ್ ಚೈಲ್ಸ್ ಮತ್ತು ಗ್ರೇಸ್ ಮೆಕಲಮ್‌ ಇದ್ದು ರಷ್ಯಾಕ್ಕೆ ಪ್ರಬಲ ಪೈಪೋಟಿ ಒಡ್ಡಬಲ್ಲರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು