ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಪೆಂಟಾಲ ಹರಿಕೃಷ್ಣ ಅವರು ಸೇಂಟ್ ಲೂಯಿಸ್ ಆನ್‌ಲೈನ್ ಚೆಸ್ ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ಜಾರಿದ್ದಾರೆ. ಬುಧವಾರ ರಾತ್ರಿ ನಡೆದ ಮೂರು ಸುತ್ತುಗಳ ಪೈಕಿ ಅವರು ಎರಡರಲ್ಲಿ ಸೋತರೆ ಒಂದರಲ್ಲಿ ಡ್ರಾ ಸಾಧಿಸಿದರು.

ಮೊದಲ ಮೂರು ಸುತ್ತಿನ ಬಳಿಕ ಹರಿಕೃಷ್ಣ ಅವರು ಆರ್ಮೇನಿಯಾದ ಲೆವ್ ಅರೋನಿಯನ್ ಜೊತೆ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದರು. ಆದರೆ ರ‍್ಯಾಪಿಡ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಇಯಾನ್ ನೆಪೊಮ್ನಿಯಾಟ್ಜಿ ಎದುರು ಸೋತ ಹರಿಕೃಷ್ಣ, ಐದನೇ ಸುತ್ತಿನಲ್ಲಿಅರೋನಿಯನ್ ಎದುರು ಡ್ರಾ ಸಾಧಿಸಿದರು. ಆರನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಮಣಿದರು.

ಟೂರ್ನಿಯ ಮೊದಲ ದಿನ ಐದನೇ ಸ್ಥಾನದಲ್ಲಿದ್ದ ಕಾರ್ಲ್‌ಸನ್, ಮೂರು ಗೆಲುವುಗಳೊಂದಿಗೆ ಒಂಬತ್ತು ಪಾಯಿಂಟ್ಸ್ ಗಳಿಸಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಎರಡನೇ ಕ್ರಮಾಂಕದ ಆಟಗಾರ ಹರಿಕೃಷ್ಣ ಅವರು ಕಾರ್ಲ್‌ಸನ್ ಎದುರು 31 ನಡೆಗಳಲ್ಲೇ ಸೋಲು ಕಂಡರು. ದಿನದ ಮತ್ತೆರಡು ಸುತ್ತುಗಳಲ್ಲಿ ನಾರ್ವೆ ಆಟಗಾರ ಕಾರ್ಲಸನ್ ಅವರು ಅರೋನಿಯನ್ ಹಾಗೂ ಅಮೆರಿಕದ ಲೇನಿಯರ್ ಡೊಮಿಂಗ್ವೇಜ್ ಎದುರು ಜಯ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.