ಶನಿವಾರ, ಮೇ 28, 2022
21 °C

ಪ್ರೊ ಕಬಡ್ಡಿ: ಬುಲ್ಸ್‌ ಬೆಂಬಲಕ್ಕೆ ಸುದೀಪ್ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಎಂಟನೇ ಆವೃತ್ತಿಗೆ ಸಜ್ಜಾಗುತ್ತಿರುವ ಬೆಂಗಳೂರು ಬುಲ್ಸ್ ತಂಡವನ್ನು ಹುರಿದುಂಬಿಸಲು ಚಿತ್ರನಟ ಕಿಚ್ಚ ಸುದೀಪ್ ಕೋರಿದ್ದಾರೆ. 

‘ನಮ್ಮ ಊರು ನಮ್ಮ ಆಟ, ನಮ್ಮ ಹುಡುಗರು, ನಮ್ಮ ಬುಲ್ಸ್‌’ ಎಂಬ ಘೋಷಣೆಯೊಂದಿಗೆ ತಂಡವನ್ನು ಬೆಂಬಲಿಸಬೇಕು ಎಂದು ಅವರು ಕೋರಿದ್ದಾರೆ ಎಂದು ತಂಡದ ಪ್ರಕಟಣೆ ತಿಳಿಸಿದೆ.

ತವರಿನಲ್ಲಿ ನಡೆಯಲಿರುವ 8ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್‌ ಯು ಮಂಬಾವನ್ನು ಎದುರಿಸಲಿದೆ. ಈ ಪಂದ್ಯ ಉದ್ಘಾಟನೆಯ ದಿನವಾದ ಇದೇ 22ರಂದು ನಡೆಯಲಿದೆ. ತಂಡಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು ಬಯೊಬಬಲ್‌ನಲ್ಲಿ ಇವೆ. ವೈಟ್‌ಫೀಲ್ಡ್‌ನ ಶೆರಾಟನ್ ಗ್ರ್ಯಾಂಡ್ ಹೋಟೆಲ್‌ನ ಸಭಾಂಗಣದಲ್ಲಿ ಪಂದ್ಯಗಳಿಗಾಗಿ ಮ್ಯಾಟ್ ಸಿದ್ಧ ಪಡಿಸಲಾಗಿದೆ.

ಯೋಧಾ: ಅಭಿಮಾನಿಗಳ ದಿನಾಚರಣೆ
ಯು.ಪಿ.ಯೋಧಾ ತಂಡವು ಅಭಿಮಾನಿಗಳ ದಿನವನ್ನು ಭಾನುವಾರ ಆಚರಿಸಿಕೊಂಡಿತು. ಬಿ.ಕೆ.ಕಬಡ್ಡಿ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕ ಮರಂಜನಾ ಕಾರ್ಯಕ್ರಮಗಳು ನಡೆದವು. ಕಬಡ್ಡಿ ಪಂದ್ಯಗಳನ್ನು ಕೂಡ ಈ ಸಂದರ್ಭದಲ್ಲಿ ಆಡಲಾಯಿತು. 

ಯು.ಪಿ.ಯೋಧಾಗೆ ಇದು ನಾಲ್ಕನೇ ಟೂರ್ನಿಯಾಗಿದ್ದು 8ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ವಿರುದ್ಧ ಸೆಣಸಲಿದೆ. ಯೋಧಾ ತಂಡದ ಅಭಿಮಾನಿ ಬಳಗವು ‘ಯೋಧಾ ಟಾಲಿ’ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ 15 ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಲಖನೌ, ಕಾನ್ಪುರ, ಆಗ್ರಾ, ನೋಯ್ಡಾ, ಅಲಿಗಢ, ಮಥುರಾ, ಅಯೋಧ್ಯ ಮುಂತಾದ ಕಡೆಗಳಿಗೆ ತೆರಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು