ಗುರುವಾರ , ಮಾರ್ಚ್ 4, 2021
30 °C

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ಸೇರಿದ್ದ ಕ್ರೀಡಾಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ರೋಚಕ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಜಯಭೇರಿ ಬಾರಿಸಿತು.

ಮೋನು ಗೋಯತ್ ಅವರ ಮಿಂಚಿನ ದಾಳಿಯ ಬಲದಿಂದ ಹರಿಯಾಣ ತಂಡವು 35–33ರಿಂದ ಬೆಂಗಾಲ್ ವಾರಿಯರ್ಸ್‌ ವಿರುದ್ಧ ಗೆದ್ದಿತು.

ಮೋನು ಅವರು ರೇಡಿಂಗ್‌ನಲ್ಲಿ ಒಟ್ಟು 12 ಪಾಯಿಂಟ್ಸ್‌ ಹೆಕ್ಕಿ ತಂದರು. ವಿಕಾಸ್ ಖಂಡೋಲಾ ಕೂಡ ಐದು ಅಂಕಗಳನ್ನು ತಂಡದ ಖಾತೆಗೆ ಕಾಣಿಕೆ ನೀಡಿದರು.ಸುನಿಲ್ ಟ್ಯಾಕಲ್‌ನಲ್ಲಿ ಮಿಂಚಿದರು. ಮೂರು ಪಾಯಿಂಟ್‌ಗಳ ಕಾಣಿಕೆ ನೀಡಿದರು.

ಆದರೆ ನಿಕಟ ಪೈಪೋಟಿ ನೀಡಿದ್ದ ಬೆಂಗಾಲ್ ಕೂಡ ಕೊನೆಯ ಕ್ಷಣದವರೆಗೂ ಪಟ್ಟು ಸಡಿಲಿಸಲಿಲ್ಲ. ತಂಡದ ಮಣಿಂದರ್ ಸಿಂಗ್ ರೇಡಿಂಗ್‌ನಲ್ಲಿ 11 ಮತ್ತು ರವೀಂದ್ರ ಕುಮಾವತ್ ಏಳು ಪಾಯಿಂಟ್ಸ್‌ ತಂದಿತ್ತರು. ಆಲ್‌ರೌಂಡ್ ಆಟ
ವಾಟಿದ ಮಹೇಶ್ ಗೌಡ ರೇಡಿಂಗ್‌ನಲ್ಲಿ ಎರಡು, ಟ್ಯಾಕಲ್‌ನಲ್ಲಿ ಎರಡು, ಬೋನಸ್‌ನಲ್ಲಿ ಒಂದು ಪಾಯಿಂಟ್‌ ಸಂಗ್ರಹಿಸಿದರು.

ಸ್ಟೀಲರ್ಸ್‌ ಮತ್ತು ಯೋಧಾ ತಂಡಗಳ ಹಣಾಹಣಿ: ಇಂದು ನಡೆಯುವ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡವು ಯು.ಪಿ.ಯೋಧಾ ವನ್ನು ಎದುರಿಸಲಿದೆ. ಹಾಗೆಯೇ ದಬಂಗ್‌ ಡೆಲ್ಲಿ ಹಾಗೂ ತಮಿಳ್‌ ತಲೈವಾಸ್‌ ತಂಡಗಳ ನಡುವೆ ಸೆಣೆಸಾಟ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು