ಗ್ರೇಟರ್ ನೊಯ್ಡಾ: ನಬಿ ಬಕ್ಷ್ ಮತ್ತು ಸುಕೇಶ್ ಹೆಗ್ಡೆ ರೇಡಿಂಗ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡವನ್ನು 33–29ರಿಂದ ಮಣಿಸಿತು.

ಇಲ್ಲಿಯ ಶಹೀದ್ ವಿಜಯ್ ಸಿಂಗ್ಪಾಟಿಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತೊಂದು ಸೋಲು ಕಾಣಬೇಕಾಯಿತು. ನಬಿಬಕ್ಷ್ 7 ಪಾಯಿಂಟ್ಸ್ ಗಳಿಸಿದರೆ, ಸುಕೇಶ್ 6 ಪಾಯಿಂಟ್ಸ್ ಗಳಿಸಿ ಮಿಂಚಿದರು. ತಲೈವಾಸ್ ಪರ ರಾಹುಲ್ ಚೌಧರಿ 7 ಮತ್ತು ಸಾಗರ್ 5 ಪಾಯಿಂಟ್ಸ್ ದಾಖಲಿಸಿದರು.

ಬೆಂಗಾಲ್ ತಂಡಕ್ಕೆ ಸುಕೇಶ್ ಮೊದಲ ಪಾಯಿಂಟ್ ತಂದುಕೊಟ್ಟರು.

ಪಂದ್ಯ ಸಮಬಲದಲ್ಲಿ ಸಾಗಿತು. ಮೊದಲಾರ್ಧದ 13ನೇ ನಿಮಿಷದಲ್ಲಿ ಎರಡೂ ತಂಡಗಳು 9–9 ಪಾಯಿಂಟ್ಸ್ ಗಳಿಸಿದ್ದವು. ಆ ಬಳಿಕ ಬೆಂಗಾಲ್ ಅಲ್ಪ ಮುನ್ನಡೆ ಸಾಧಿಸಿದರೂ ಮೊದಲಾರ್ಧ ಮುಕ್ತಾಯದ ವೇಳೆಗೆ ಸ್ಕೋರ್ 13–13 ಸಮಬಲದಲ್ಲೇ ಇತ್ತು.

ದ್ವಿತೀಯಾರ್ಧದಲ್ಲಿ ಬೆಂಗಾಲ್ ಮುನ್ನಡೆಯನ್ನು ಗಳಿಸುತ್ತಾ ಸಾಗಿತು. ಪಂದ್ಯ ಮುಕ್ತಾಯಕ್ಕೆ 14 ನಿಮಿಷ ಉಳಿದಿರುವಾಗ ತಲೈವಾಸ್ ತಂಡ ಆಲ್ ಔಟ್ ಆಯಿತು. ಬೆಂಗಾಲ್ಗೆ 22–16ರ ಮುನ್ನಡೆ ಲಭಿಸಿತು. ಆ ಬಳಿಕವೂ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿದ್ದರೂ ತಲೈವಾಸ್ಗೆ ಮುನ್ನಡೆ ಗಳಿಸಲಾ ಗಲಿಲ್ಲ. ಆ ತಂಡ ಸೋಲಿನೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿತು.

ಈ ಪಂದ್ಯದ ಮೂಲಕ ರಾಹುಲ್ ಚೌಧರಿ ಪ್ರೊ ಕಬಡ್ಡಿ ಲೀಗ್ನಲ್ಲಿ ಒಟ್ಟು 950 ರೇಡ್ ಪಾಯಿಂಟ್ಸ್ ಮೈಲುಗಲ್ಲು ತಲುಪಿದರು.

ಟೈಟನ್ಸ್ ಜಯಭೇರಿ: ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡ ಯುಪಿ ಯೋಧಾ ತಂಡದ ಎದುರು 41–36 ಪಾಯಿಂಟ್ಸ್ನಿಂದ ಗೆದ್ದಿತು. ಟೈಟನ್ಸ್ ಪರ ಸಿದ್ಧಾರ್ಥ್ ದೇಸಾಯಿ ಅಮೋಘ 15 ಪಾಯಿಂಟ್ಸ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.