ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್‌: ಪುಣೇರಿ ಪಲ್ಟನ್ ಜಯಭೇರಿ

ಹರಿಯಾಣ ಸ್ಟೀಲರ್ಸ್‌ಗೆ ನಿರಾಸೆ
Last Updated 18 ನವೆಂಬರ್ 2022, 21:09 IST
ಅಕ್ಷರ ಗಾತ್ರ

ಹೈದರಾಬಾದ್‌: ಅಸ್ಲಂ ಇನಾಂದಾರ್ ಮತ್ತು ಮೋಹಿತ್‌ ಗೋಯತ್ ಅವರ ‘ಸೂಪರ್‌ ಟೆನ್‌‘ ಸಾಧನೆಯ ಬಲದಿಂದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಹೈದರಾಬಾದ್‌ನ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ಪುಣೇರಿ 41–28ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಪರಾಭವಗೊಳಿಸಿತು.

ರೇಡಿಂಗ್‌ನಲ್ಲಿ ಮಿಂಚಿದ ಅಸ್ಲಂ ಮತ್ತು ಮೋಹಿತ್‌ ತಲಾ 10 ಪಾಯಿಂಟ್ಸ್ ಗಳಿಸಿದರು. ಆಕಾಶ್ ಶಿಂಧೆ (7 ಪಾಯಿಂಟ್ಸ್) ಕೂಡ ಗೆಲುವಿಗೆ ಕೊಡುಗೆ ನೀಡಿದರು.

ಸ್ಟೀಲರ್ಸ್ ತಂಡಕ್ಕಾಗಿ ಪ್ರಪಂಜನ್‌ ಗಳಿಸಿದ 8 ಪಾಯಿಂಟ್ಸ್ ವ್ಯರ್ಥವಾದವು. ಮೀತು ಶರ್ಮಾ ಮತ್ತು ವಿನಯ್ ತಲಾ 4 ಪಾಯಿಂಟ್ಸ್ ಗಳಿಸಿದರು.

ಆರಂಭದಿಂದಲೇ ಉತ್ತಮ ಆಟವಾಡಿದ ಪುಣೇರಿ ಆಟಗಾರರು ಮೊದಲಾರ್ಧದ ಕೊನೆಯಲ್ಲಿ 20–10ರಿಂದ ಮುಂದಿದ್ದರು. ದ್ವಿತೀಯಾರ್ಧದಲ್ಲಿ ಹರಿಯಾಣ ತಿರುಗೇಟು ನೀಡುವ ಛಲ ತೋರಿತು. ಈ ಅವಧಿಯಲ್ಲಿ ಸ್ಟೀಲರ್ಸ್ 18 ಮತ್ತು ಪುಣೇರಿ 21 ಪಾಯಿಂಟ್ಸ್ ಕಲೆಹಾಕಿದವು. ಆದರೆ ಗೆಲುವು ಒಲಿಸಿಕೊಳ್ಳುವಲ್ಲಿ ಪುಣೇರಿ ಯಶಸ್ವಿಯಾಯಿತು.

ಈ ಜಯದೊಂದಿಗೆ ಪುಣೇರಿ 54 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿತ್ತು. ಬೆಂಗಳೂರು (51) ಎರಡನೇ ಸ್ಥಾನದಲ್ಲಿತ್ತು.

ಬೆಂಗಾಲ್‌ಗೆ ಜಯ: ಇನ್ನೊಂದು ಹಣಾಹಣಿಯಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು 36–28ರಿಂದ ತೆಲುಗು ಟೈಟನ್ಸ್ ತಂಡಕ್ಕೆ ಸೋಲುಣಿಸಿತು.

ಬೆಂಗಾಲ್ ತಂಡದ ನಾಯಕ ಮಣಿಂದರ್ ಸಿಂಗ್‌ ಅಮೋಘ 12 ಪಾಯಿಂಟ್ಸ್ ಕಲೆಹಾಕಿದರು. ಶ್ರೀಕಾಂತ್ ಜಾಧವ್‌ (7) ಕೂಡ ಜಯಕ್ಕೆ ಕಾಣಿಕೆ ನೀಡಿದರು. ಟೈಟನ್ಸ್ ತಂಡಕ್ಕಾಗಿ ಅಭಿಷೇಕ್ ಸಿಂಗ್‌ 9 ಮತ್ತು ಸಿದ್ಧಾರ್ಥ್ ದೇಸಾಯಿ 8 ಪಾಯಿಂಟ್ಸ್ ಗಳಿಸಿದರು.

ದಿನದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ 45–38 ರಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು ಮಣಿಸಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮಂದುವರಿಯಿತು.

ಇಂದಿನ ಪಂದ್ಯಗಳು
*
ಯುಪಿ ಯೋಧಾ– ಜೈಪುರ ಪಿಂಕ್ ಪ್ಯಾಂಥರ್ಸ್
* ತೆಲುಗು ಟೈಟನ್ಸ್– ಯು ಮುಂಬಾ
* ದಬಂಗ್ ಡೆಲ್ಲಿ– ಪಟ್ನಾ ಪೈರೇಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT