ಭಾನುವಾರ, ಏಪ್ರಿಲ್ 18, 2021
32 °C

ಸಿಂಧುಗೆ ಚಿನ್ನದ ಸಿಹಿ; ಲಕ್ಷ್ಯಗೆ ಸಿರಿ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani
  • ಬ್ಯಾಡ್ಮಿಂಟನ್‌ ಅಂಗಳದಲ್ಲಿ ಈ ವರ್ಷ ಭಾರತಕ್ಕೆ ಸಿಹಿ ಮತ್ತು ಕಹಿಯ ಅನುಭವವಾಯಿತು.
  • ಪಿ.ವಿ.ಸಿಂಧು ಆಗಸ್ಟ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಹೊಸ ಭಾಷ್ಯ ಬರೆದಿದ್ದರು. ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದಿದ್ದ ಸಿಂಧು ನಂತರ ಹಲವು ಟೂರ್ನಿಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟರು.
  • ಕೋಚ್‌ ಕಿಮ್‌ ಜು ಹ್ಯೂನ್‌ ಅವರು ಸಿಂಧು ಅವರನ್ನು ಹೃದಯ ಶೂನ್ಯಳೆಂದು ದೂರಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
  • ವರ್ಷದ ಆರಂಭದಲ್ಲಿ ಮಲೇಷ್ಯಾ ಮಾಸ್ಟರ್ಸ್‌ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡು ಹಿಗ್ಗಿದ್ದ ಸೈನಾ ನೆಹ್ವಾಲ್‌ ಅವರಿಗೂ ನಂತರದ ಟೂರ್ನಿಗಳಲ್ಲಿ ಯಶಸ್ಸು ಗಗನಕುಸುಮವಾಯಿತು.
  • ಬಿ.ಸಾಯಿ ಪ್ರಣೀತ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ 36 ವರ್ಷಗಳ ನಂತರ ಭಾರತಕ್ಕೆ ಪದಕ ಗೆದ್ದುಕೊಟ್ಟರು. ಅವರು ಬಾಸೆಲ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌ ಮತ್ತು ಪರುಪಳ್ಳಿ ಕಶ್ಯಪ್‌ ಪಾಲಿಗೆ ಈ ವರ್ಷ ನಿರಾಶಾದಾಯಕವಾಗಿತ್ತು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ, ಈ ವರ್ಷ ಒಟ್ಟು 13 ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.
  • 18 ವರ್ಷದ ಲಕ್ಷ್ಯ ಸೇನ್‌ ಪಾಲಿಗೆ ಈ ವರ್ಷ ಸ್ಮರಣೀಯವಾಗಿತ್ತು. ಒಟ್ಟು ಐದು ಪ್ರಶಸ್ತಿಗಳನ್ನು ಜಯಿಸಿದ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 32ನೇ ಸ್ಥಾನಕ್ಕೇರಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು.
  • ಸೌರಭ್‌ ವರ್ಮಾ ಅವರು ವಿಯೆಟ್ನಾಂ ಮತ್ತು ಹೈದರಾಬಾದ್‌ನಲ್ಲಿ ನಡೆದಿದ್ದ ಸೂಪರ್‌ 100 ಟೂರ್ನಿಗಳಲ್ಲಿ ಚಾಂಪಿಯನ್‌ ಆದರೆ, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಥಾಯ್ಲೆಂಡ್‌ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎಂಬ ಹಿರಿಮೆಗೆ ಪಾತ್ರರಾದರು. ಇವರು ಫ್ರೆಂಚ್‌ ಓಪನ್‌ನಲ್ಲೂ ಫೈನಲ್‌ ಪ್ರವೇಶಿಸಿದ್ದರು.
  • ನವೆಂಬರ್‌ನಲ್ಲಿ ನಡೆದಿದ್ದ ಪ್ರೊ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ ಸಿಂಧು ಮತ್ತು ಚೀನಾ ತೈಪೆಯ ತೈ ಜು ಯಿಂಗ್‌ ತಲಾ ₹77 ಲಕ್ಷ ಮೌಲ್ಯ ಪಡೆದರು.
  • ಜಪಾನ್‌ನ ಕೆಂಟೊ ಮೊಮೊಟಾ ಈ ಋತುವಿನಲ್ಲಿ ಒಟ್ಟು 11 ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು