ಗುರುವಾರ , ಏಪ್ರಿಲ್ 9, 2020
19 °C

ಆರ್‌ಸಿಯು ಕಬಡ್ಡಿ: ಸಿ.ಎಸ್. ಬೆಂಬಳಗಿ ಕಾಲೇಜು ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ರಾಮದುರ್ಗುದ ಸಿ.ಎಸ್. ಬೆಂಬಳಗಿ ಕಾಲೇಜು ತಂಡದವರು ಇಲ್ಲಿನ ಎಸ್‌ಕೆಇ ಶಿಕ್ಷಣ ಸಂಸ್ಥೆಯ ಆರ್.ಪಿ.ಡಿ. ಕಾಲೇಜಿನಿಂದ ಈಚೆಗೆ ಆಯೋಜಿಸಿದ್ದ 2019-20ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಟ್ಟದ ಅಂತರ ಕಾಲೇಜುಗಳ ವಲಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ದ್ವಿತೀಯ ಸ್ಥಾನವನ್ನು ರಾಮದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತೃತೀಯ ಸ್ಥಾನವನ್ನು ಖಾನಾಪುರದ ಮರಾಠಾ ಮಂಡಳ‌ ಕಾಲೇಜು ಹಾಗೂ 4ನೇ ಸ್ಥಾನವನ್ನು ಬೆಳಗಾವಿಯ ಜಿ.ಎಸ್.ಎಸ್‌. ಕಾಲೇಜು ತಂಡಗಳು ಪಡೆದವು.

ಜಿಲ್ಲೆಯ ವಿವಿಧ ಕಾಲೇಜುಗಳ 18 ತಂಡಗಳು ಭಾಗವಹಿಸಿದ್ದವು.

ಎಸ್.ಕೆ.ಇ. ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಲ್. ಅಜಗಾಂಕರ ಹಾಗೂ ಆರ್‌ಸಿಯು ದೈಹಿಕ‌ ಶಿಕ್ಷಣ‌ ವಿಭಾಗದ ಮುಖ್ಯಸ್ಥ ಜಗದೀಶ ಗಸ್ತಿ‌, ಪ್ರಭಾರ ಪ್ರಾಚಾರ್ಯರಾದ ಎಸ್.ಎ. ನಾಯಕ, ಜಿಮ್ಖಾನಾ ಉಪಾಧ್ಯಕ್ಷ ಪ್ರೊ.ಸಿ.ಎಂ. ಮುನ್ನೋಳ್ಳಿ, ಪ್ರೊ.ಎಸ್.ಎಸ್‌‌. ಶಿಂಧೆ, ಡಾ.ಆರ್.ಜೆ. ಪೊವಾರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣ ಎನ್. ಬಹುಮಾನ ವಿತರಣೆ ನಡೆಸಿಕೊಟ್ಟರು.

ಪ್ರೊ.ಎಸ್.ಎಂ. ಚೌಗಲಾ‌ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು