ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯ್‌ಯಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌ ಕಾಮಗಾರಿಗೆ ಚಾಲನೆ

Last Updated 22 ಫೆಬ್ರುವರಿ 2021, 17:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಸಿದ್ಧವಾಗಲಿದೆ. ಮಹಿಳೆಯರಿಗೆ 330 ಹಾಸಿಗೆಗಳ ವಸತಿ ನಿಲಯ, ಅಡುಗೆ ಮನೆ ಮತ್ತು ಊಟದ ಕೋಣೆಯೂ ನಿರ್ಮಾಣವಾಗಲಿದೆ. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ ಕಾಮಗಾರಿಗಳಿಗೆ ಚಾಲನೆ ನೀಡಿದರು.

400 ಮೀಟರ್ಸ್‌ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ಎಂಟು ಲೇನ್‌ಗಳು ಇರಲಿದ್ದು ಎರಡು ಹೆಚ್ಚುವರಿ ನೇರ ಲೇನ್‌ಗಳೂ ಇರುತ್ತವೆ. 500 ಮೀಟರ್ಸ್‌ ಆವೆಮಣ್ಣಿನ ಟ್ರ್ಯಾಕ್‌ ಮತ್ತು 100 ಮೀಟರ್ಸ್‌ ಮರಳಿನ ಟ್ರ್ಯಾಕ್‌ ಕೂಡ ಇರಲಿದ್ದು ಹೈ ಪರ್ಫಾರ್ಮೆನ್ಸ್‌ ತರಬೇತಿಯನ್ನು ಗುರಿಯಾಗಿರಿಕೊಂಡು ಈ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಖೇಲೊ ಇಂಡಿಯಾದಲ್ಲಿ ಮೀಸಲಿಟ್ಟಿರುವ ಬಜೆಟ್‌ನ ₹ 13.86 ಕೋಟಿ ಮೊತ್ತವನ್ನು ಇದಕ್ಕಾಗಿ ಬಳಸಲಾಗುತ್ತಿದ್ದು 2022ರಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಸಾಯ್‌ನಲ್ಲಿ ತರಬೇತಿ ಪಡೆಯುವ ಹಾಕಿಪಟುಗಳಿಗಾಗಿ₹ 4.41 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಜಿಮ್‌ಗೆ ಸಚಿವರು ಚಾಲನೆ ನೀಡಿದರು. ಇದರಲ್ಲಿ ಫಿಜಿಯೊ ಥೆರಪಿ ಮತ್ತು ಮಸಾಜ್ ಕೊಠಡಿ ಇತದೆ. ರಾಜ್ಯ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮತ್ತು ಸಾಯ್ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಅಜಯ್ ಬಹ್ಲ್‌ ಇದ್ದರು.

ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ಖೇಲೊ ಇಂಡಿಯಾ ಬ್ಯಾಡ್ಮಿಂಟನ್ ಕೇಂದ್ರವನ್ನು ಸಚಿವರು ಉದ್ಘಾಟಿಸಿದರು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಕೋವಿಡ್‌ ಲಸಿಕೆ ನೀಡುವಾಗ ಅವರನ್ನು ಆದ್ಯತೆ ಮೇಲೆ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT