ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ರಷ್ಯಾ ಆಟಗಾರ್ತಿಗೆ ಸೋಲುಣಿಸಿದ ಉಕ್ರೇನ್‌ನ ಸ್ವಿಟೊಲಿನಾ

ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ರಷ್ಯಾ ಅಥ್ಲೀಟ್‌ಗಳು: ಅವಕಾಶ ನೀಡಿದ ಐಪಿಸಿ
Last Updated 2 ಮಾರ್ಚ್ 2022, 13:57 IST
ಅಕ್ಷರ ಗಾತ್ರ

ಮೆಕ್ಸಿಕೊ ಸಿಟಿ: ತನ್ನ ದೇಶದ ಧ್ವಜದ ಬಣ್ಣದ (ಹಳದಿ ಮತ್ತು ನೀಲಿ) ಪೋಷಾಕು ಧರಿಸಿದ ಕಣಕ್ಕಿಳಿದ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರು ಮೊಂಟೆರಿ ಓಪನ್ ಟೆನಿಸ್‌ ಟೂರ್ನಿಯ ಪಂದ್ಯದಲ್ಲಿ ರಷ್ಯಾದ ಅನಸ್ತಾಸಿಯಾ ಪೊಟಪೊವಾ ಅವರನ್ನು ಸೋಲಿಸಿದರು.

ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಎಲಿನಾ ಅವರಿಗೆ 6–2, 6–1ರಿಂದ ಜಯ ಒಲಿಯಿತು. ಪಂದ್ಯವನ್ನು ಬಹಿಷ್ಕರಿಸುವುದಕ್ಕಿಂತ ದೇಶಕ್ಕಾಗಿ ಏನಾದರೂ ಹೆಚ್ಚಿನದನ್ನು ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ.
ತಮ್ಮ ದೇಶದ ರಾಷ್ಟ್ರೀಯ ಚಿಹ್ನೆಗಳನ್ನು ಬಳಸಿ ಆಡುವ ರಷ್ಯಾ ಅಥವಾ ಬೆಲಾರೂಸ್‌ನ ಅಥ್ಲೀಟ್‌ಗಳ ಮೇಲೆ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ ನಿರ್ಬಂಧ ಹೇರುವವರೆಗೆ ಆ ದೇಶಗಳ ಸ್ಪರ್ಧಿಗಳ ಎದುರು ಆಡುವುದಿಲ್ಲ ಎಂದು ಈ ಹಿಂದೆ ಸ್ವಿಟೋಲಿನಾ ಹೇಳಿದ್ದರು.

ರಷ್ಯಾ ಮತ್ತು ಬೆಲಾರೂಸ್ ಅಥ್ಲೀಟ್‌ಗಳಿಗೆ ರಾಷ್ಟ್ರಧ್ವಜ ಬಳಸದೆ ಆಡಲು ಅನುಮತಿ ನೀಡಲಾಗುವುದು ಎಂದುಮಂಗಳವಾರ ಟೆನಿಸ್‌ ಆಡಳಿತ ಮಂಡಳಿಗಳು ಹೇಳಿದ್ದವು.

ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ರಷ್ಯಾ ಅಥ್ಲೀಟ್‌ಗಳು: ಅವಕಾಶ ನೀಡಿದ ಐಪಿಸಿ

ಬೀಜಿಂಗ್‌: ಮುಂಬರುವ ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ರಷ್ಯಾ ಮತ್ತು ಬೆಲಾರೂಸ್‌ನ ಕ್ರೀಡಾಪಟುಗಳಿಗೆ ಅನುಮತಿ ನೀಡಲಾಗಿದೆ.

ರಷ್ಯಾ ಮತ್ತು ಅದರ ಮಿತ್ರದೇಶ ಬೆಲಾರೂಸ್‌ಉಕ್ರೇನ್‌ ವಿರುದ್ಧ ಸಮರ ನಡೆಸುತ್ತಿವೆ. ಹೀಗಾಗಿ ಆ ದೇಶಗಳ ಅಥ್ಲೀಟ್‌ಗಳನ್ನು ಎಲ್ಲ ಕ್ರೀಡಾ ಫೆಡರೇಷನ್‌ಗಳು ಹೊರಗಿಡಬೇಕೆಂದು ಈ ಹಿಂದೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಒತ್ತಾಯಿಸಿತ್ತು.

ಆದರೆ ಬುಧವಾರದಂದು ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಸಭೆಯನ್ನು ನಡೆಸಿ, ‘ಎರಡೂ ದೇಶಗಳ ಕ್ರೀಡಾಪಟುಗಳು ‘ತಟಸ್ಥ’ ಎಂದು ಸ್ಪರ್ಧಿಸಲು ಅನುಮತಿಸಲಾಗುವುದು.ಅವರು ಪ್ಯಾರಾಲಿಂಪಿಕ್ ಧ್ವಜದ ಅಡಿಯಲ್ಲಿ ಸ್ಪರ್ಧಿಸುತ್ತಾರೆ ಮತ್ತು ಪದಕ ಪಟ್ಟಿಯಲ್ಲಿ ಅವರನ್ನು ಸೇರಿಸಲಾಗುವುದಿಲ್ಲ‘ ಎಂದು ಹೇಳಿದೆ.

ಚಳಿಗಾಲದ ಪ್ಯಾರಾಲಿಂಪಿಕ್ಸ್ ಇದೇ ಶುಕ್ರವಾರದಿಂದ ಮಾರ್ಚ್‌ 13ರವರೆಗೆ ನಡೆಯಲಿದೆ.

ಮೋಟರಸ್ಪೋರ್ಟ್ಸ್ ಚಾಲಕರಿಗೆ ಇಂಗ್ಲೆಂಡ್‌ ನಿರ್ಬಂಧ: ರಷ್ಯಾ ಮತ್ತು ಬೆಲಾಸರ್‌ ದೇಶದ ಪರವಾನಿಗೆ ಹೊಂದಿರುವ ಮೋಟರ್‌ಸ್ಪೋರ್ಟ್ಸ್ ಚಾಲಕರಿಗೆ ತನ್ನ ದೇಶದ ಕೂಟಗಳಲ್ಲಿ ಸ್ಪರ್ಧಿಸಲು ಇಂಗ್ಲೆಂಡ್‌ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಫಾರ್ಮುಲಾ ಒನ್ ಚಾಲಕ ನಿಖಿತಾ ಮೇಜ್‌ಪಿನ್ ಅವರು ಈ ಬಾರಿ ಬ್ರಿಟಿಷ್‌ ಗ್ರ್ಯಾನ್‌ ಪ್ರಿಯಲ್ಲಿ ಭಾಗವಹಿಸಲಾಗುವುದಿಲ್ಲ.

ಸಿಲ್ವರ್‌ಸ್ಟೋನ್‌ನಲ್ಲಿ ಜುಲೈ 3ರಿಂದ ಬ್ರಿಟಿಷ್‌ ಗ್ರ್ಯಾನ್‌ಪ್ರಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT