ಬುಧವಾರ, ಸೆಪ್ಟೆಂಬರ್ 22, 2021
29 °C

ಆರ್ಟಿಸ್ಟಿಕ್ ಈಜು: ರೊಮಾಶಿನಾ ಆರನೇ ಚಿನ್ನದ ದಾಖಲೆ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ರಷ್ಯಾದ ಆರ್ಟಿಸ್ಟಿಕ್ ಈಜುಪಟು ಸ್ವೆಟ್ಲಾನಾ ರೊಮಾಶಿನಾ ಒಲಿಂಪಿಕ್ಸ್‌ನಲ್ಲಿ ಆರನೇ ಚಿನ್ನ ಗಳಿಸಿ ದಾಖಲೆ ಬರೆದರು.  ಸ್ವೆಟ್ಲಾನಾ ಕೊಲೆಸ್ನಿಚೆಂಕೊ ಜೊತೆಗೂಡಿದ ಅವರು ಡ್ಯುಯೆಟ್‌ ಫ್ರೀ ರೂಟೀನ್ ಫೈನಲ್‌ನಲ್ಲಿ ಬುಧವಾರ ಅಗ್ರಸ್ಥಾನ ಗಳಿಸಿದರು.

ಎರಡು ದಶಕಗಳಿಗಿಂತ ಹೆಚ್ಚು ಕಾಲ ರಷ್ಯಾದ ಸ್ಪರ್ಧಿಗಳು ಆರ್ಟಿಸ್ಟಿಕ್ ಈಜು ವಿಭಾಗದಲ್ಲಿ ಪಾರಮ್ಯ ಸಾಧಿಸಿದ್ದಾರೆ. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಆ ದೇಶದವರು ಕೊನೆಯ ಬಾರಿ ಸೋಲು ಕಂಡಿದ್ದರು.

ರಷ್ಯಾದ ಅನಸ್ತಾಸಿಯಾ ಡೆವೀಡೊವಾ ಮತ್ತು ನತಾಲಿಯಾ ಇಶ್ಚೆಂಕೊ ಒಲಿಂಪಿಕ್ಸ್‌ನಲ್ಲಿ ತಲಾ ಐದು ಚಿನ್ನ ಗೆದ್ದ ಸಾಧನೆ ಮಾಡಿದ್ದರು. ರೊಮಾಶಿನಾ ಈಗ ಅವರನ್ನು ಹಿಂದಿಕ್ಕಿದ್ದಾರೆ.

31 ವರ್ಷದ ರೊಮಾಶಿನಾ ತಾನು ಸ್ಪರ್ಧಿಸಿದ ಎಲ್ಲ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಯೂರೋಪಿಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಪದಕದ ಸಾಧನೆ ಮಾಡಿದ್ದಾರೆ.

ಫೈನಲ್‌ನಲ್ಲಿ ರಷ್ಯಾದ ಜೋಡಿ ಒಟ್ಟು 195.9079 ಪಾಯಿಂಟ್ಸ್ ಕಲೆಹಾಕಿತು. ಬೆಳ್ಳಿ ಪದಕ ವಿಜೇತ ಚೀನಾದ ಹುವಾಂಗ್ ಕ್ಸುಚೆನ್‌ ಮತ್ತು ಸನ್‌ ವೆನ್ಯಾನ್ ಜೋಡಿಗೆ ಸಿಕ್ಕಿದ್ದು 192.4499 ಪಾಯಿಂಟ್ಸ್. ಉಕ್ರೇನ್‌ನ ಮಾರ್ಟಾ ಫೆಡಿನಾ ಮತ್ತು ಅನಸ್ತಾಸಿಯಾ ಸಾಯ್ಚುಕ್‌ (189.4620) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಆರ್ಟಿಸ್ಟಿನ್ ಈಜು ವಿಭಾಗದಲ್ಲಿ ಉಕ್ರೇನ್‌ಗೆ ಇದು ಮೊದಲ ಒಲಿಂಪಿಕ್ಸ್ ಪದಕವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು