ಆಲ್‌ ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಜಯಿಸಬೇಕು: ಸಮೀರ್ ವರ್ಮಾ

ಬುಧವಾರ, ಮಾರ್ಚ್ 27, 2019
22 °C

ಆಲ್‌ ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಜಯಿಸಬೇಕು: ಸಮೀರ್ ವರ್ಮಾ

Published:
Updated:
Prajavani

ನವದೆಹಲಿ: ‘ಈ ಬಾರಿಯ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸುವ ಗುರಿ ಹೊಂದಿದ್ದೇನೆ’ ಎಂದು ಭಾರತದ ಆಟಗಾರ ಸಮೀರ್‌ ವರ್ಮಾ ನುಡಿದಿದ್ದಾರೆ.

ಮಾರ್ಚ್‌ ಆರರಿಂದ ಬರ್ಮಿಂಗ್‌ಹ್ಯಾಮ್‌ ಅರೇನಾದಲ್ಲಿ ಆಲ್‌ ಇಂಗ್ಲೆಂಡ್‌ ಟೂರ್ನಿ ನಡೆಯಲಿದೆ. ಪುರುಷರ ಸಿಂಗಲ್ಸ್‌ನಲ್ಲಿ ಕಣದಲ್ಲಿರುವ ಸಮೀರ್‌, ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಎದುರು ಸೆಣಸಲಿದ್ದಾರೆ.

‘ಆ್ಯಕ್ಸಲ್‌ಸನ್‌ ಎದುರು ಈ ಹಿಂದೆ ಆಡಿದ ಎರಡು ಪಂದ್ಯಗಳಲ್ಲೂ ಸೋತಿದ್ದೇನೆ. ಹಾಗಂತ ಎದೆಗುಂದುವುದಿಲ್ಲ. ಎಂಟು ತಿಂಗಳ ಹಿಂದೆ ವಿಕ್ಟರ್‌ ಎದುರು ಪಂದ್ಯ ಆಡಿದ್ದಾಗ ಉತ್ತಮ ಲಯದಲ್ಲಿರಲಿಲ್ಲ. ಈ ಬಾರಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇನೆ. ಆ್ಯಕ್ಸಲ್‌ಸನ್‌ ಅವರನ್ನು ಮಣಿಸಲು ಸೂಕ್ತ ಯೋಜನೆ ಹೆಣೆದು ಕಣಕ್ಕಿಳಿಯುತ್ತೇನೆ’ ಎಂದಿದ್ದಾರೆ.

ಸಮೀರ್‌ ಅವರು 2016ರಲ್ಲಿ ನಡೆದಿದ್ದ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು. ಹೋದ ವರ್ಷ ಅವರು ಸ್ವಿಸ್‌ ಓಪನ್‌, ಹೈದರಾಬಾದ್‌ ಓಪನ್‌ ಮತ್ತು ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !