ಬುಧವಾರ, ಏಪ್ರಿಲ್ 14, 2021
24 °C

ಮೈಸೂರಿನ ಶಶಿಧರ್ ಅಂಧರ ಚೆಸ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ನಗರದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಜ್ಯ ಅಂಧರ ಓಪನ್‌ ಚೆಸ್ ಪಂದ್ಯಾವಳಿಗೆ ಭಾನುವಾರ ಸಂಜೆ ತೆರೆಬಿತ್ತು. ಮೈಸೂರಿನ ಕೆ.ಎಂ.ಶಶಿಧರ್ ಅವರು ಉತ್ತಮ ಸಾಧನೆ ತೋರಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಎರಡು ದಿನ ನಡೆದ ಪಂದ್ಯದಲ್ಲಿ 1547 ರೇಟಿಂಗ್ ಹಾಗೂ 8 ಪಾಯಿಂಟ್ ಗಳಿಸಿ ಮೊದಲ ಸ್ಥಾನ ಗಿಟ್ಟಿಸಿದ ಶಶಿಧರ್‌ ₹10 ಸಾವಿರ ನಗದು, ಪ್ರಮಾಣ ಪತ್ರ ಹಾಗೂ ಟ್ರೋಫಿ ತಮ್ಮದಾಗಿಸಿಗಿಕೊಂಡರು.
ದ್ವಿತೀಯ ಹಾಗೂ ತೃತೀಯ ಬಹುಮಾನ ಕ್ರಮವಾಗಿ ರಾಯಚೂರಿನ ಬಸಲಿಂಗಪ್ಪ ಮರಡ್ಡಿ ಮತ್ತು ಶಿವಮೊಗ್ಗದ ಅಂತರರಾಷ್ಟ್ರೀಯ ಚೆಸ್ ಪಟು ಕೃಷ್ಣ ಉಡುಪ ಅವರ ಪಾಲಾದವು.

ಅತ್ಯುತ್ತಮ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಕೆ.ಎಸ್.ಶೀಲಾವತಿ ಪ್ರಶಸ್ತಿ ಪಡೆದರು. ಬೆಂಗಳೂರಿನ ದೀಪಾ ಅಕಾಡೆಮಿ ಹಾಗೂ ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರವು ಬೆಸ್ಟ್ ಸ್ಕೂಲ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು