ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನ ವದಂತಿ ನಡುವೆ ಸಾನಿಯಾ ಬರ್ತ್‌ಡೇಗೆ ಶೋಯಬ್ ಶುಭಾಶಯ

Last Updated 15 ನವೆಂಬರ್ 2022, 7:32 IST
ಅಕ್ಷರ ಗಾತ್ರ

ಮುಂಬೈ: ವಿಚ್ಛೇದನ ವದಂತಿ ನಡುವೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಪತಿ, ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರಿಂದ ಹುಟ್ಟುಹಬ್ಬದ ಶುಭಾಶಯ ಬಂದಿದೆ.

‘ಹ್ಯಾಪಿ ಬರ್ತ್‌ಡೇ ಸಾನಿಯಾ.. ಅತ್ಯಂತ ಆರೋಗ್ಯಕರ ಮತ್ತು ಸಂತೋಷದ ಜೀವನ ನಿನ್ನದಾಗಲಿ. ಹುಟ್ಟುಹಬ್ಬದ ದಿನವನ್ನು ಎಂಜಾಯ್ ಮಾಡು’ ಎಂದು ಶೋಯಬ್ ಇನ್‌ಸ್ಟಾಗ್ರಾಮ್‌ನಲ್ಲಿಬರೆದುಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಇವತ್ತು 36ನೇ ವಸಂತಕ್ಕೆ ಕಾಲಿರಿಸಿದ್ದಾರೆ.

2010ರಲ್ಲಿ ಮದುವೆಯಾಗಿದ್ದ ಸಾನಿಯಾ ಮತ್ತು ಶೋಯಬ್ ಮಲಿಕ್ ದುಬೈಗೆ ಶಿಫ್ಟ್ ಆಗಿದ್ದರು. ದಂಪತಿಗೆ ಒಬ್ಬ ಮಗನಿದ್ದು, ಇತ್ತೀಚೆಗೆ ವಿಚ್ಛೇದನದ ಬಗ್ಗೆ ವದಂತಿ ಹಬ್ಬಿತ್ತು.

‘ಒಡೆದ ಹೃದಯಗಳು ಅಲ್ಲಾಹ್‌ನನ್ನು ಹುಡುಕಲು ಎಲ್ಲಿಗೆ ಹೋಗುತ್ತವೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ಹಾಕಿದ್ದ ಪೋಸ್ಟ್ ವಿಚ್ಚೇದನದ ವದಂತಿಗೆ ಇಂಬು ನೀಡಿತ್ತು.

ಅಲ್ಲದೆ, ಇತ್ತೀಚೆಗೆ ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಜೊತೆಗಿನ ಚಿತ್ರವನ್ನು ಹಂಚಿಕೊಂಡು, ‘ಕಠಿಣ ದಿನಗಳಲ್ಲಿ ನನಗೆ ಸಿಕ್ಕ ಒಳ್ಳೆಯ ಕ್ಷಣಗಳು’ ಎಂದು ಶೀರ್ಷಿಕೆ ನೀಡಿದ್ದರು.

ಆದರೆ, ಶೋಯಬ್ ಅವರ ಹೊಸ ಪೋಸ್ಟ್, ವಿಚ್ಛೇದನ ವದಂತಿ ಬಗ್ಗೆ ಅನುಮಾನ ಹುಟ್ಟಿಸಿದೆ.

ಕಳೆದ ವಾರವಷ್ಟೆ, ಶೋಯಬ್ ಮತ್ತು ಸಾನಿಯಾ, ತಾವಿಬ್ಬರು ಒಟ್ಟಿಗೆ ‘ದಿ ಮಿರ್ಜಾ ಮಲಿಕ್ ಶೋ’ ಎಂಬ ಟಾಕ್ ಶೋ ನಡೆಸಿಕೊಡುವುದಾಗಿ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT