ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಶೂಟರ್‌ಗಳಿಗೆ ತಾಪಮಾನದ ಸವಾಲು

ಅಸಾಕಾ ಶೂಟಿಂಗ್ ರೇಂಜ್‌ನಲ್ಲಿ ತರಬೇತಿಗೆ ತೊಂದರೆ
Last Updated 20 ಜುಲೈ 2021, 10:36 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ ಸ್ಪರ್ಧೆಗಳಿಗಾಗಿ ತರಬೇತಿ ನಡೆಸುತ್ತಿರುವ ಶೂಟಿಂಗ್ ಪಟುಗಳು ನಗರದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಇಲ್ಲಿಯ ಅಸಾಕ ಶೂಟಿಂಗ್‌ ರೇಂಜ್‌ನಲ್ಲಿ ಪುರುಷ ಮತ್ತು ಮಹಿಳಾ ಶೂಟರ್‌ಗಳ ಅಭ್ಯಾಸಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. 50 ಮೀಟರ್‌, 25 ಮೀ. ಮತ್ತು 10 ಮೀ. ವಿಭಾಗದ ಸ್ಪರ್ಧೆಗಳ ತರಬೇತಿಗಾಗಿ ಇದೊಂದೇ ತಾಣವನ್ನು ನಿಗದಿಪಡಿಸಲಾಗಿದೆ.

10 ಮೀಟರ್ ವಿಭಾಗದ ಸ್ಪರ್ಧೆಗಳನ್ನು ಈ ರೇಂಜ್‌ನ ಒಳಾಂಗಣದಲ್ಲಿ ನಡೆಸಲಾಗುತ್ತದೆ. ಆದರೆ ಹೆಚ್ಚಿನ ತಾಪಮಾನದಿಂದಾಗಿ ಅದು ಹೊರಾಂಗಣದಂತೆಯೇ ಭಾಸವಾಗುತ್ತಿದೆ. ಜಾಕೆಟ್ ಧರಿಸುವ ರೈಫಲ್ ಶೂಟರ್‌ಗಳು ಹೆಚ್ಚಾಗಿ ಉಷ್ಣತೆಯ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ.

ಭಾರತದ 15 ಶೂಟರ್‌ಗಳು ಈ ಬಾರಿಯ ಕ್ರೀಡಾಕೂಟದಲ್ಲಿ ಪದಕಗಳಿಗೆ ಗುರಿಯಿಡಲಿದ್ದಾರೆ.

ಶೂಟರ್‌ಗಳು ಎದುರಿಸುತ್ತಿರುವ ತೊಂದರೆ ಕುರಿತು ಪ್ರತಿಕ್ರಿಯಿಸಿರುವ ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯ (ಎನ್‌ಆರ್‌ಎಐ) ಅಧಿಕಾರಿಯೊಬ್ಬರು ‘ಕ್ರೀಡಾಕೂಟದ ಸ್ಥಳೀಯ ಆಯೋಜಕರು ಅಥ್ಲೀಟ್‌ಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಿದ್ದಾರೆ. ರೈಫಲ್ ಶೂಟರ್‌ಗಳಿಗೆ ಈ ತಾಪಮಾನದಿಂದ ಹೆಚ್ಚು ಕಿರಿಕಿರಿ ಎನಿಸುತ್ತದೆ. ಶೂಟಿಂಗ್ ಹಾಲ್‌ನಲ್ಲಿ ಹವಾನಿಯಂತ್ರಕಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು‘ ಎಂದಿದ್ದಾರೆ.

ಭಾರತದ ಶೂಟರ್‌ಗಳು ಸೋಮವಾರದಿಂದಲೇ ತರಬೇತಿ ಆರಂಭಿಸಿದ್ದಾರೆ.

ಜುಲೈ 24ರಿಂದ ಆಗಸ್ಟ್ 2ರವರೆಗೆ ಅಸಾಕಾ ಶೂಟಿಂಗ್ ರೇಂಜ್‌ನಲ್ಲಿ ಸ್ಪರ್ಧೆಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT