ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ 10,000 ಮೀ. ಓಟ: ಸಿಫಾನ್‌ ವಿಶ್ವದಾಖಲೆ

Last Updated 6 ಜೂನ್ 2021, 15:13 IST
ಅಕ್ಷರ ಗಾತ್ರ

ಹೆಂಜೆಲೊ, ನೆದರ್ಲೆಂಡ್ಸ್‌: ನೆದರ್ಲೆಂಡ್ಸ್‌ನ ಓಟಗಾರ್ತಿ ಸಿಫಾನ್‌ ಹಸನ್‌ ಅವರು ಮಹಿಳೆಯರ 10,000 ಮೀಟರ್‌ ಓಟವನ್ನು ಭಾನುವಾರ ವಿಶ್ವದಾಖಲೆ ಅವಧಿಯಲ್ಲಿ ಪೂರೈಸಿದರು. ಆ ಮೂಲಕ ಜುಲೈ ಕೊನೆಯಲ್ಲಿ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ಅಣಿಯಾಗಿರುವುದನ್ನು ಜಾಹೀರುಗೊಳಿಸಿದರು.

28 ವರ್ಷ ವಯಸ್ಸಿನ ಹಸನ್‌, ನಿಗದಿತ ದೂರವನ್ನು 29 ನಿಮಿಷ 06.82 ಸೆಕೆಂಡುಗಳಲ್ಲಿ ಕ್ರಮಿಸಿದರು. ಆ ಮೂಲಕ ಅವರು ಇಥಿಯೋಪಿಯಾದ ಅಲಮಾಝ್ ಅಯಾನಾ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ (2016) ಹೆಸರಿನಲ್ಲಿದ್ದ ದಾಖಲೆಯನ್ನು (29ನಿ.17.45 ಸೆ.) ಹಿಂದಿಕ್ಕಿದರು.

‘ವಾವ್‌! ಇಲ್ಲಿ ವಿಶ್ವ ದಾಖಲೆಯ ಓಟ ಸಾಕಾರವಾಗುವುದೆಂದು ಕನಸಿನಲ್ಲಷ್ಟೇ ಯೋಚಿಸಿದ್ದೆ’ ಎಂದು ಇಥಿಯೋಪಿಯಾ ಸಂಜಾತೆ ಸಿಫಾನ್‌ ಸಂಭ್ರಮಪಟ್ಟರು. 2008ರಲ್ಲಿ ನೆದರ್ಲೆಂಡ್ಸ್‌ಗೆ ವಲಸೆ ಬಂದು ಅಲ್ಲಿನ ಪೌರತ್ವ ಪಡೆದಾಗ ಸಿಫಾನ್‌ ವಯಸ್ಸು ಬರೇ 15.

‘ಟೋಕಿಯೊ ಒಲಿಂಪಿಕ್ಸ್‌ಗೆ ನಾವು ಸಜ್ಜಾಗಲು ಪಡುತ್ತಿರುವ ಪರಿಶ್ರಮವನ್ನು ಇದು ಸಾಬೀತುಮಾಡಿದೆ. ಡಚ್‌ (ನೆದರ್ಲೆಂಡ್ಸ್‌ ದೇಶದ) ಅಭಿಮಾನಿಗಳ ಎದುರು ಈ ದಾಖಲೆ ಮೂಡಿರುವುದರಿಂದ ಸಂತಸವಾಗಿದೆ ಎಂದರು.

ಇದು ಸಿಫಾನ್‌ ಅವರಿಗೆ ನಾಲ್ಕನೇ ವಿಶ್ವ ದಾಖಲೆ. ಅವರ ಕೋಚ್‌ ಆಗಿರುವ ಆಲ್ಬರ್ಟೊ ಸಾಲಝಾರ್‌ ಈಗ ನಿಷೇಧ ಶಿಕ್ಷೆಯಲ್ಲಿದ್ದಾರೆ.

ಯುರೋಪಿಯನ್‌ ಕೂಟದಲ್ಲಿ ಪೌಲಾ ರ‍್ಯಾಡ್‌ಕ್ಲಿಫ್‌ ದೀರ್ಘಕಾಲದಿಂದ ಮಹಿಳೆಯರ 10,000 ಮೀ. ಓಟದಲ್ಲಿ ಹೊಂದಿದ್ದ ದಾಖಲೆಯನ್ನು ಸಿಫಾನ್‌ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮುರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT