ಶುಕ್ರವಾರ, ಮೇ 27, 2022
31 °C

ಥಾಮಸ್‌- ಊಬರ್ ಕಪ್ ಬ್ಯಾಡ್ಮಿಂಟನ್ ಫೈನಲ್‌: ಚಿನ್ನದ ಪದಕದ ನಿರೀಕ್ಷೆಯಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಥಾಮಸ್‌ ಮತ್ತು ಊಬರ್ ಕಪ್‌ ಬ್ಯಾಡ್ಮಿಂಟನ್ ಫೈನಲ್‌ ಟೂರ್ನಿಯಲ್ಲಿ ಭಾರತ ಪುರುಷರ ಮತ್ತು ಮಹಿಳಾ ತಂಡಗಳು ಮೊದಲ ಬಾರಿ ಚಿನ್ನದ ಪದಕ ಜಯಿಸುವ ಛಲದಲ್ಲಿವೆ.

ಭಾನುವಾರದಿಂದ ಇಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡಗಳಿಗೆ ಲಕ್ಷ್ಯ ಸೇನ್‌ ಮತ್ತು ಪಿ.ವಿ.ಸಿಂಧು ನೇತೃತ್ವ ವಹಿಸಲಿದ್ದಾರೆ.

ಥಾಮಸ್‌ ಕಪ್ ಟೂರ್ನಿಯಲ್ಲಿ ಪುರುಷರ ತಂಡವು ಒಮ್ಮೆಯೂ ಪದಕ ಜಯಿಸಿಲ್ಲ. ಕನಿಷ್ಠ ಸೆಮಿಫೈನಲ್‌ ಕೂಡ ತಲುಪಿಲ್ಲ. ಆದರೆ ಮಹಿಳಾ ತಂಡವು ಊಬರ್ ಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ (2014 ಮತ್ತು 2016ರ ಆವೃತ್ತಿ) ಕಂಚಿನ ಪದಕದ ಸಾಧನೆ ಮಾಡಿದೆ.

ಕಳೆದ ವರ್ಷ ಉಭಯ ತಂಡಗಳು ಕ್ವಾರ್ಟರ್‌ಫೈನಲ್‌ನಲ್ಲೇ ಅಭಿಯಾನ ಕೊನೆಗೊಳಿಸಿದ್ದವು.

ಈ ಬಾರಿ ಪುರುಷರ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಮೊದಲ ಪಂದ್ಯದಲ್ಲಿ ಜರ್ಮನಿ ಸವಾಲು ಎದುರಿಸಲಿದೆ. ಚೀನಾ ತೈಪೆ ಮತ್ತು ಕೆನಡಾ ಈ ಗುಂಪಿನಲ್ಲಿರುವ ಇನ್ನುಳಿದ ತಂಡಗಳು.

ಡಿ ಗುಂಪಿನಲ್ಲಿರುವ ಮಹಿಳಾ ತಂಡಕ್ಕೆ ದಕ್ಷಿಣ ಕೊರಿಯಾ, ಕೆನಡಾ ಮತ್ತು ಅಮೆರಿಕ ತಂಡಗಳನ್ನು ಎದುರಿಸಬೇಕಿದೆ. ಡ್ರಾ ಪ್ರಕಾರ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಗ್ರ ಎರಡು ಸ್ಥಾನ ಪಡೆದ ತಂಡಗಳು ನಾಕೌಟ್‌ಗೆ ಅರ್ಹತೆ ಗಳಿಸಲಿವೆ.

ಭಾರತ ತಂಡಗಳು: ಪುರುಷರು: ಸಿಂಗಲ್ಸ್: ಲಕ್ಷ್ಯ ಸೇನ್‌, ಕಿದಂಬಿ ಶ್ರೀಕಾಂತ್‌, ಎಚ್‌.ಎಸ್ದ್.ಪ್ರಣಯ್‌, ಪ್ರಿಯಾಂಶು ರಾಜಾವತ್‌. ಡಬಲ್ಸ್: ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಎಂ.ಆರ್. ಅರ್ಜುನ್‌, ಧ್ರುವ ಕಪಿಲ, ಕೃಷ್ಣಪ್ರಸಾದ್ ಗರಗ, ವಿಷ್ಣುವರ್ಧನ್ ಗೌಡ್‌ ಪಂಜಾಲ.

ಮಹಿಳೆಯರು: ಸಿಂಗಲ್ಸ್: ಪಿ.ವಿ.ಸಿಂಧು, ಆಕರ್ಷಿ ಕಶ್ಯಪ್‌, ಅಸ್ಮಿತಾ ಚಲಿಹಾ, ಉನ್ನತಿ ಹೂಡಾ. ಡಬಲ್ಸ್: ಗಾಯತ್ರಿ ಗೋಪಿಚಂದ್‌, ತ್ರೀಶಾ ಜೋಲಿ, ಸಿಮ್ರನ್ ಸಿಂಘಿ, ರಿತಿಕಾ ಥಾಕರ್‌, ತನಿಶಾ ಕ್ರಾಸ್ತೊ, ಶೃತಿ ಮಿಶ್ರಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು