ಶನಿವಾರ, ಮಾರ್ಚ್ 6, 2021
31 °C

23ರಂದು ಒಲಿಂಪಿಕ್ ದಿನ: ವರ್ಕೌಟ್‌ನಲ್ಲಿ ಸಿಂಧು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು, ಜೂನ್ 23ರಂದು ನಡೆಯಲಿರುವ ಒಲಿಂಪಿಕ್ ದಿನದಂಗವಾಗಿ ‘ಲೈವ್‌ ವರ್ಕೌಟ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ  ವಿಶ್ವದ 21   ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಶ್ವದಾದ್ಯಂತ ಇದು  ‘ಎಟ್ ಒಲಿಂಪಿಕ್ ಇನ್ಸ್ಟಾಗ್ರಾಮ್‌ ಲೈವ್‌’ನಲ್ಲಿ (@olympics instagram live)ನೇರಪ್ರಸಾರವಾಗಲಿದೆ.  ಅಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಅವರೆಲ್ಲರೂ ತಮ್ಮ ಅಚ್ಚುಮೆಚ್ಚಿನ ವ್ಯಾಯಾಮಗಳನ್ನು ಮಾಡಿ ತೋರಿಸಲಿದ್ದಾರೆ. ಅಭಿಮನಿಗಳೂ, ಒಲಿಂಪಿಯನ್‌ಗಳು ಭಾಗವಹಿಸಲಿದ್ದಾರೆ.

‘ಕೋವಿಡ್ –19 ಹಾವಳಿಯಿಂದ ವಿಶ್ವದಲ್ಲಿ ಲಾಕ್‌ಡೌನ್ ಪರಿಸ್ಥಿತಿ ಇದೆ. ಒಲಿಂಪಿಕ್ ಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಐಒಸಿಯು ಈಚೆಗೆ  ಆರಂಭಿಸಿದ್ದ ಹ್ಯಾಷ್‌ಟ್ಯಾಗ್ ಸ್ಟೇ ಸ್ಟ್ರಾಂಗ್, ಹ್ಯಾಷ್‌ಟ್ಯಾಗ್‌ ಸ್ಟೇಆ್ಯಕ್ಟಿವ್ , ಹ್ಯಾಷ್‌ಟ್ಯಾಗ್ ಸ್ಟೇ ಹೆಲ್ದಿ ಅಭಿಯಾನಗಳಿಗೆ  ಚಾಲನೆ ನೀಡಲಾಗಿತ್ತು. ಐವತ್ತು ದೇಶಗಳ ಸುಮಾರು ಐದು ಸಾವಿರ ಒಲಿಂಪಿಯನ್ ಅಥ್ಲೀಟ್‌ಗಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಆರೋಗ್ಯಯುತ ಜೀವನದ ಅರಿವು ಮೂಡಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು