Paralympics: ಆರ್ಚರಿಯಲ್ಲಿ ದೇಶಕ್ಕೆ ಮೊದಲ ಪದಕ; ದಾಖಲೆ ಬರೆದ ಹರ್ವಿಂದರ್ ಸಿಂಗ್

ಟೋಕಿಯೊ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಆ ಮೂಲಕ ಪ್ಯಾರಾ ಕ್ರೀಡೆಗಳ ಈ ಸ್ಪರ್ಧೆಯಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಶ್ರೇಯಕ್ಕೆ ಭಾಜನರಾಗಿದ್ದಾರೆ.
ಸೆಮಿಫೈನಲ್‌ನಲ್ಲಿ ಅಮೆರಿಕದ ಕೆವಿನ್ ಮಥರ್ ಎದುರು 6-4 ಅಂತರದಿಂದ ಮಣಿದ ಸಿಂಗ್, ಕಂಚಿನ ಪದಕಕ್ಕಾಗಿ ಕೊರಿಯಾದ ಕಿಮ್ ಮಿನ್ ಸು ಜೊತೆ ಸೆಣಸಿದರು. ಕಿಮ್ ವಿರುದ್ಧ 6-5 ಅಂತರದ ಗೆಲುವು ಸಾಧಿಸಿದರು.
ಸಿಂಗ್ ಎದುರು ಸೆಮಿಯಲ್ಲಿ ಜಯ ಸಾಧಿಸಿದ ಮಥರ್ ಫೈನಲ್‌ನಲ್ಲಿ ಚೀನಾದ ಝಾವೋ ಎಲ್ ಎದುರು 6-4 ಅಂತರದಿಂದ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ವಿಶ್ವದ ನಂ.23 ಶ್ರೇಯಾಂಕದ ಸಿಂಗ್ ಪಂಜಾಬ್‌ನವರು. 2018ರ ಏಷಿಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.
ಇವನ್ನೂ ಓದಿ
* Tokyo Paralympics: ಹೈಜಂಪ್ನಲ್ಲಿ ಬೆಳ್ಳಿ ಗೆದ್ದ 18 ವರ್ಷದ ಪ್ರವೀಣ್ ಕುಮಾರ್
* Paralympics: ಚಿನ್ನ ಬೆನ್ನಲ್ಲೇ ಕಂಚು ಗೆದ್ದ 19 ವರ್ಷದ ಅವನಿ ಐತಿಹಾಸಿಕ ಸಾಧನೆ
* ನನ್ನ ಸಾಧನೆಗೆ ನೀರಜ್ ಚೋಪ್ರಾ ಸ್ಫೂರ್ತಿ: ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸುಮಿತ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.