ಟೋಕಿಯೊ: ಭಾರತದ ಅನಿರ್ಬನ್ ಲಾಹಿರಿ ಒಲಿಂಪಿಕ್ಸ್ನಲ್ಲಿ ಅಮೋಘ ಆರಂಭ ಕಂಡರು. ಎರಡನೇ ಬಾರಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿರುವ ಅವರು ಮೊದಲ ಸುತ್ತಿನಲ್ಲಿ ಎಂಟನೇ ಸ್ಥಾನವನ್ನು ಹಂಚಿಕೊಂಡರು.

ಹವಾಮಾನ ಕೈಕೊಟ್ಟ ಕಾರಣ ಗುರುವಾರ ಸ್ಪರ್ಧೆಗೆ ಸ್ವಲ್ಪ ಅಡ್ಡಿಯಾಯಿತು. ಆದರೂ ಲಾಹಿರಿ ಮಿಂಚಿದರು. ಬ್ರಿಟನ್ನ ಪೌಲ್ ಕಾಸಿ, ಸ್ವೀಡನ್ನ ಅಲೆಕ್ಸ್ ನೊರೇನ್ ಮತ್ತು ಮೆಕ್ಸಿಕೊದ ಸೆಬಾಸ್ಟಿಯನ್ ಮುನೋಜ್ ಕೂಡ ಲಾಹಿರಿ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಭಾರತದ ಉದಯನ್ ಮಾನೆ ಉತ್ತಮ ಆರಂಭ ಕಂಡರೂ ಕೊನೆಯಲ್ಲಿ ಮುಗ್ಗರಿಸಿದರು.

ವಿಶ್ವ ರ್ಯಾಂಕಿಂಗ್ನಲ್ಲಿ 161ನೇ ಸ್ಥಾನದಲ್ಲಿರುವ ಆಸ್ಟ್ರಿಯಾದ ಸೆಪ್ ಸ್ಟ್ರಾಕ ದಿನದ ಅಗ್ರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಆದರೆ ಸ್ಟಾರ್ ಆಟಗಾರರಾದ ಜಸ್ಟಿನ್ ಥಾಮಸ್, ಹಿಡೆಕಿ ಮತ್ಸ್ಯುಯಾಮ, ಕಾಲಿನ್ ಮೊರಿಕಾವ ಮುಂತಾದವರು ನಿರೀಕ್ಷೆ ಸಾಮರ್ಥ್ಯ ತೋರಲಾಗದೆ ನಿರಾಸೆಗೆ ಒಳಗಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.