ಬುಧವಾರ, ಜೂನ್ 29, 2022
26 °C
ಪ್ರಶಸ್ತಿ ಪ್ರದಾನ ಇಂದು: ಶಾಂತಾ, ಕರುಂಬಯ್ಯಗೆ ಜೀವಮಾನ ಸಾಧನೆ ಗೌರವ

ರಾಜ್ಯ ಕ್ರೀಡಾ ಪ್ರಶಸ್ತಿ ಪ್ರಕಟ: ರಾಹುಲ್, ಮಯಂಕ್‌ಗೆ ಏಕಲವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಈ ಸಲದ  ಕರ್ನಾಟಕ ರಾಜ್ಯೋತ್ಸವ ಸಂಭ್ರಮವು ಇಮ್ಮಡಿಯಾಗಿದೆ.  ಕಳೆದ ಮೂರು ವರ್ಷಗ
ಳಿಂದ ತಡೆಹಿಡಿಯಲಾಗಿದ್ದ ರಾಜ್ಯ ಕ್ರೀಡಾ ಪ್ರಶಸ್ತಿಗಳನ್ನು ಭಾನುವಾರ ಪ್ರಕಟಿಸಲಾಗಿದೆ.

2017, 2018 ಮತ್ತು 2019ನೇ ವರ್ಷಗಳ ಕ್ರೀಡಾರತ್ನ, ಏಕಲವ್ಯ, ಜೀವಮಾನ ಸಾಧನೆ ಮತ್ತು ಕ್ರೀಡಾ ಪೋಷಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಭಾನುವಾರ ಬಿಡುಗಡೆ ಮಾಡಿದರು.

ಸೋಮವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಏಕಲವ್ಯ ಪ್ರಶಸ್ತಿಗೆ 31, ಜೀವಮಾನ ಸಾಧನೆ ಪುರಸ್ಕಾರಕ್ಕೆ 6, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 27 ಸಾಧಕರು ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ
ಐದು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಏಕಲವ್ಯ ಪ್ರಶಸ್ತಿಗೆ ₹ 2 ಲಕ್ಷ, ಜೀವಮಾನ ಸಾಧನೆ ಪ್ರಶಸ್ತಿಗೆ ₹ 1.5 ಲಕ್ಷ,ಕ್ರೀಡಾ ರತ್ನ ಪ್ರಶಸ್ತಿಗೆ ₹ 1 ಲಕ್ಷ, ಕ್ರೀಡಾ ಪೋಷಕ ಪ್ರಶಸ್ತಿಗೆ ₹ 5 ಲಕ್ಷ
ಮತ್ತು ಸ್ಮರಣಿಕೆಗಳನ್ನು ನೀಡಲಾಗುವುದು’ ಎಂದು ಸಚಿವರು ತಿಳಿಸಿದರು.

ರಾಹುಲ್–ಮಯಂಕ್‌ಗೆ  ಏಕಲವ್ಯ: ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ ಅವರನ್ನು ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸದ್ಯ ಅವರು  ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಮಹಿಳಾ ಕ್ರಿಕೆಟ್  ತಂಡದ ವೇದಾ ಕೃಷ್ಣಮೂರ್ತಿ, ಅಥ್ಲೀಟ್ ರೀನಾ ಜಾರ್ಜ್, ಬೆಂಗಳೂರಿನ ಈಜುಪಟು ಖುಷಿ ದಿನೇಶ್,  ಕಬಡ್ಡಿ ಪಟು ಎನ್. ಉಷಾ
ರಾಣಿ, ಹಾಕಿಪಟು ನಿಕಿನ್ ತಿಮ್ಮಯ್ಯ, ಈಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ, ಸೈಕ್ಲಿಸ್ಟ್ ಮೇಘಾ ಗೂಗಾಡ, ರಾಜು ಭಾಟಿ, ವೆಂಕಪ್ಪ ಕೆಂಗಲಗುತ್ತಿ ಅವರಿಗೂ ಪ್ರಶಸ್ತಿ ಗೌರವ ಸಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಕ್ರೀಡೆಯ ಗೋಪಾಲಕೃಷ್ಣ ಪ್ರಭು ಹಾಗೂ  ಶ್ರೀನಿವಾಸಗೌಡ ಅವರಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗಿದೆ. 

ಕ್ರೀಡಾ ಪೋಷಕ ಪ್ರಶಸ್ತಿ ವಿಭಾಗದಲ್ಲಿ  ಮಂಡ್ಯದ ಸ್ವರ್ಣ ಫುಟ್‌ಬಾಲ್‌ ಅಭಿವೃದ್ಧಿ ಸಂಸ್ಥೆ, ಹಳಿಯಾಳದ ವಿಆರ್ ದೇಶಪಾಂಡೆ ಮೆಮೊರಿಯಲ್‌ ಟ್ರಸ್ಟ್‌ (2018–19:). ಮಂಗಳೂರು ವಿಶ್ವವಿದ್ಯಾಲಯ (2019–20) ತುಮಕೂರಿನ ಶ್ರೀಸಿದ್ಧಗಂಗಾ ಎಜುಕೇಷನ್‌ ಟ್ರಸ್ಟ್‌, ಬೀದರ್‌ ಜಿಲ್ಲೆಯ ಮಾಣಿಕ್‌ಪ್ರಭು ಸ್ಪೋರ್ಟ್ಸ್‌ ಅಕಾಡೆಮಿ (2020–21) ಸಂಸ್ಥೆಗಳಿಗೆ ಗೌರವ ಸಂದಿದೆ.

ವಿವಿಧ ಪ್ರಶಸ್ತಿಗೆ ಆಯ್ಕೆಯಾಗಿರುವವರು

2017ನೇ ಸಾಲಿನ ಪ್ರಶಸ್ತಿ: ಏಕಲವ್ಯ: ಬೆಂಗಳೂರಿನ ರೀನಾ ಜಾರ್ಜ್ (ಅಥ್ಲಿಟಿಕ್‌), ಯು.ಕೆ. ಮಿಥುಲಾ (ಬ್ಯಾಡ್ಮಿಂಟನ್‌), ಅವಿನಾಶ್ ಮಣಿ (ಈಜು), ಎಸ್‌.ವರ್ಷಾ (ಬಿಲಿಯರ್ಡ್ಸ್‌/ ಸ್ನೂಕರ್‌), ಕೆ.ತೇಜಸ್‌ (ಶೂಟಿಂಗ್‌), ಶೇಖರ್ ವೀರಸ್ವಾಮಿ (ಟೆನಿಸ್‌– ಪ್ಯಾರಾ), ಎಂ.ದೀಪಾ (ರೋಯಿಂಗ್‌), ಬಿ.ಕೆ.ಅನಿಲ್ ಕುಮಾರ್ (ಬ್ಯಾಸ್ಕೆಟ್‌ಬಾಲ್‌), ಎನ್‌.ಉಷಾ ರಾಣಿ (ಕಬಡ್ಡಿ), ವಿ.ಖುಷಿ (ಟೇಬಲ್‌ ಟೆನಿಸ್‌), ಬಾಗಲಕೋಟೆ ಜಿಲ್ಲೆ ಬೆವಿನಮಟ್ಟಿಯ ಕುಮಾರ ಅರ್ಜುನ್ ಹಲ್ಕುರ್ಕಿ (ಕುಸ್ತಿ), ಟಕ್ಕಳಕಿಯ ರಾಜು ಅಡಿವೆಪ್ಪಾ ಭಾಟಿ (ಸೈಕ್ಲಿಂಗ್‌), ಕೊಡಗು ಜಿಲ್ಲೆಯ ಎಂ.ಎನ್‌.ಪೊನ್ನಮ್ಮ (ಹಾಕಿ), ಬೆಳಗಾವಿ ಜಿಲ್ಲೆಯ ವಿನಾಯಕ ರೋಖಡೆ (ವಾಲಿಬಾಲ್‌).

ಜೀವಮಾನ ಸಾಧನೆ: ಬೆಂಗಳೂರಿನ ಎಂ.ಫೆಡ್ರಿಕ್ಸ್ (ಹಾಕಿ), ಡಾ.ಪಟೇಲ್ ಮೊಹಮದ್ ಇಲಿಯಾಸ್ (ವಾಲಿಬಾಲ್‌).

ಕ್ರೀಡಾ ರತ್ನ: ಬೆಂಗಳೂರಿನ ಎಂ.ರಂಜಿತ್‌ (ಥ್ರೋಬಾಲ್‌), ಮಣಿಕಂದನ್‌ (ಪ್ಯಾರಾ ಕ್ಲೈಬಿಂಗ್‌), ಮೈಸೂರು ಜಿಲ್ಲೆಯ ಎಂ.ವೀಣಾ (ಕೊಕ್ಕೊ), ಮಂಡ್ಯ ಜಿಲ್ಲೆಯ ಕೆ.ಎಸ್‌.ಕೌಸಲ್ಯಾ (ಕಬಡ್ಡಿ), ದಕ್ಷಿಣ ಕನ್ನಡ ಜಿಲ್ಲೆಯ ಜಿ. ಜಯಲಕ್ಷ್ಮಿ (ಬಾಲ್‌ಬ್ಯಾಡ್ಮಿಂಟನ್‌), ಚಿಕ್ಕಮಗಳೂರು ಜಿಲ್ಲೆಯ ಎಚ್‌.ಎಸ್‌. ಅನುಶ್ರೀ (ಕುಸ್ತಿ), ಬಾಗಲಕೋಟೆ ಜಿಲ್ಲೆಯ ಬೀಮಪ್ಪ ಹಡಪದ (ಮಲ್ಲಕಂಬ), ಚಂದ್ರಶೇಖರ್‌ ಎಚ್‌.ಕಲ್ಲಹೊಲದ (ಗುಂಡು ಎತ್ತುವುದು), ಹಾವೇರಿ ಜಿಲ್ಲೆಯ ಮಹೇಶ್‌ ಆರ್‌.ಎರೆಮನಿ (ಆಟ್ಯಾಪಾಟ್ಯಾ), ದಕ್ಷಿಣ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು (ಕಂಬಳ), ಶ್ರೀನಿವಾಸಗೌಡ (ಕಂಬಳ).

2018ನೇ ಸಾಲಿನ ಪ್ರಶಸ್ತಿ:

ಏಕಲವ್ಯ: ಬೆಂಗಳೂರಿನ ಕೆ.ಎಲ್‌.ರಾಹುಲ್‌ (ಕ್ರಿಕೆಟ್‌), ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್‌), ನಿಕ್ಕಿನ್ ತಿಮ್ಮಯ್ಯ (ಹಾಕಿ), ಶಕೀನಾ ಖಾತೂನ್ (ಪ್ಯಾರಾ ಪವರ್‌ಲಿಫ್ಟಿಂಗ್‌), ಹರಿ ನಟರಾಜ್ (ಈಜು), ಮಂಡ್ಯ ಜಿಲ್ಲೆಯ ಜಿ.ಕೆ. ವಿಜಯಕುಮಾರಿ (ಅಥ್ಲಿಟಿಕ್‌), ಎಚ್‌.ಎಂ.ಬಾಂಧವ್ಯ (ಬ್ಯಾಸ್ಕೆಟ್‌ಬಾಲ್‌), ಬಾಗಲಕೋಟೆ ಜಿಲ್ಲೆಯ ಮೇಘಾ ಗೂಗಾಡ್ (ಸೈಕ್ಲಿಂಗ್‌), ಬೆಳಗಾವಿ ಜಿಲ್ಲೆಯ ಗೀತಾ ದಾನಪ್ಪಗೊಳ್ (ಜೂಡೊ) .

ಜೀವಮಾನ ಸಾಧನೆ: ಬೆಂಗಳೂರಿನ ಸಿ.ಎ. ಕರುಂಬಯ್ಯ (ಹಾಕಿ), ಆರ್. ಮಂಜುನಾಥ (ಕಬಡ್ಡಿ).

ಕ್ರೀಡಾ ರತ್ನ: ಬೆಳಗಾವಿ ಜಿಲ್ಲೆಯ ಸಂಪತ್ ನಾಗಪ್ಪ ಯರಗಟ್ಟಿ (ಅಟ್ಯಾಪಾಟ್ಯಾ), ಯಮನಪ್ಪ ಎಂ.ಕಲ್ಲೋಳಿ (ಮಲ್ಲಕಂಬ), ದಕ್ಷಿಣ ಕನ್ನಡ ಜಿಲ್ಲೆಯ ಸುರೇಶ್ ಶೆಟ್ಟಿ (ಕಂಬಳ), ಕೊಡಗು ಜಿಲ್ಲೆಯ ಬಿ.ಡಿ.ಲಾವಣ್ಯ (ಬಾಲ್‌ ಬ್ಯಾಡ್ಮಿಂಟನ್‌), ಹಾಸನ ಜಿಲ್ಲೆಯ ಎಚ್‌.ಎನ್‌. ಶಿವಕುಮಾರ್ (ಕೊಕ್ಕೊ), ಬೆಂಗಳೂರಿನ ಐ.ಕಿರಣ್‌ಕುಮಾರ್ (ಟೆನಿಕಾಯ್ಟ್‌), ದಾವಣಗೆರೆ ಜಿಲ್ಲೆಯ ಮಲ್ಲಪ್ಪಗೌಡ ಪಾಟೀಲ್(ಕುಸ್ತಿ) .

2019ನೇ ಸಾಲಿನ ಪ್ರಶಸ್ತಿ:

ಏಕಲವ್ಯ: ಬೆಂಗಳೂರಿನ ಖುಷಿ ದಿನೇಶ್‌ (ಈಜು), ಮಯಾಂಕ್ ಅಗರ‌ವಾಲ್ (ಕ್ರಿಕೆಟ್‌), ಪುನೀತ್ ನಂದಕುಮಾರ್ (ಪ್ಯಾರಾ ಈಜು), ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ(ಕ್ರಿಕೆಟ್‌), ಉಡುಪಿ ಜಿಲ್ಲೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್‌), ದಕ್ಷಿಣ ಕನ್ನಡ ಜಿಲ್ಲೆಯ ಅಭಿಷೇಕ ಎನ್.ಶೆಟ್ಟಿ (ಅಥ್ಲಿಟಿಕ್‌), ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಕೆಂಗಲಗುತ್ತಿ (ಸೈಕ್ಲಿಂಗ್), ಕೊಡಗು ಜಿಲ್ಲೆಯ ಪುಲಿಂದ ಲೋಕೇಶ್ ತಿಮ್ಮಣ್ಣ (ಹಾಕಿ).

ಜೀವಮಾನ ಸಾಧನೆ: ಬೆಂಗಳೂರಿನ ಶಾಂತಾ ರಂಗಸ್ವಾಮಿ (ಕ್ರಿಕೆಟ್‌), ಶಿವಮೊಗ್ಗ ಜಿಲ್ಲೆಯ ಸಂಜೀವ ಆರ್.ಕನಕ (ಕೊಕ್ಕೊ).

ಕ್ರೀಡಾ ರತ್ನ: ಧಾರವಾಡ ಜಿಲ್ಲೆಯ ಅನಿತಾ ಬಿಚಗಟ್ಟಿ (ಅಟ್ಯಾಪಟ್ಯಾ), ಹಾಸನ ಜಿಲ್ಲೆಯ ಸುದರ್ಶನ್ (ಕೊಕ್ಕೊ), ದಕ್ಷಿಣ ಕನ್ನಡ ಜಿಲ್ಲೆಯ ಎಸ್‌.ಕೆ.ಪಲ್ಲವಿ (ಬಾಲ್‌ ಬ್ಯಾಡ್ಮಿಂಟನ್‌), ಮೈಸೂರು ಜಿಲ್ಲೆಯ ಎಸ್‌.ರಕ್ಷಿತಾ (ಕಬಡ್ಡಿ), ಬಾಗಲಕೋಟೆ ಜಿಲ್ಲೆಯ ಅನುಪಮಾ ಎಚ್.ಕೆರಕಲಮಟ್ಟಿ (ಮಲ್ಲಕಂಬ), ದಕ್ಷಿಣ ಕನ್ನಡ ಜಿಲ್ಲೆಯ ಕೆ. ಪ್ರವೀಣ್ (ಕಂಬಳ),

ಶಿವಮೊಗ್ಗ ಜಿಲ್ಲೆಯ ಎಚ್‌. ಮಂಜುನಾಥ್ (ಥ್ರೋಬಾಲ್‌), ಬಾಗಲಕೋಟೆ ಜಿಲ್ಲೆಯ ಸತೀಶ್ ಪಡತಾರೆ (ಕುಸ್ತಿ), ಬೆಂಗಳೂರಿನ ಅನಿಶಾ ಮಣೆಗಾರ್ (ಟೆನಿಕಾಯ್ಟ್‌).

ಕ್ರೀಡಾ ಪೋಷಕ ಪ್ರಶಸ್ತಿ: 2018–19ನೇ ಸಾಲು: ಮಂಡ್ಯದ ಸ್ವರ್ಣ ಫುಟ್‌ಬಾಲ್‌ ಅಭಿವೃದ್ಧಿ ಸಂಸ್ಥೆ, ಹಳಿಯಾಳದ ವಿಆರ್ ದೇಶಪಾಂಡೆ ಮೆಮೊರಿಯಲ್‌ ಟ್ರಸ್ಟ್‌.

2019–20ನೇ ಸಾಲು: ಮಂಗಳೂರು ವಿಶ್ವವಿದ್ಯಾಲಯ.

2020–21 ನೇ ಸಾಲು: ತುಮಕೂರಿನ ಶ್ರೀಸಿದ್ಧಗಂಗಾ ಎಜುಕೇಷನ್‌ ಟ್ರಸ್ಟ್‌, ಬೀದರ್‌ ಜಿಲ್ಲೆಯ ಮಾಣಿಕ್‌ಪ್ರಭು ಸ್ಪೋರ್ಟ್ಸ್‌ ಅಕಾಡೆಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು