ಬೆಂಗಳೂರು: ಉತ್ತಮ ಸಾಮರ್ಥ್ಯ ತೋರಿದ ಆಯುಷಿ ಬಾಲಕೃಷ್ಣ ಗೋಡ್ಸೆ ಹಾಗೂ ಮೋಹನೀಶ್ ನಂದಿ ನಾರಾ ಅವರು ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಕೆಡೆಟ್ ಬಾಲಕಿಯರ ಮತ್ತು ಬಾಲಕರ ವಿಭಾಗಗಳಲ್ಲಿ ಭಾನುವಾರ ಪ್ರಶಸ್ತಿ ಜಯಿಸಿದರು.
ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಆಯುಷಿ 11-9, 11-5, 9-11, 11-9ರಿಂದ ಕೈರಾ ಬಾಳಿಗಾ ಎದುರು ಗೆದ್ದು ಬೀಗಿದರು. ಸೆಮಿಫೈನಲ್‌ನಲ್ಲಿ ಅವರು 11-5,11-9,6-11,11-4ರಿಂದ ವೃಶಾಲಿ ಕಿಣಿ ಅವರನ್ನು ಸೋಲಿಸಿದ್ದರು. ಬಾಲಕರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಮೋಹನೀಶ್ 11- 9, 11-9,6 -11, 9 -11, 11-7ರಿಂದ ತೇಶುಭ್ ದಿನೇಶ್ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಮೋಹನೀಶ್ 11-8, 11-7, 14 -16, 11-4ರಿಂದ ಶೇಷನಾಥ್ ಅವರನ್ನು ಸೋಲಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.