ಬೆಂಗಳೂರು: ಕೋರಮಂಗಲ ಎಸ್‌ಸಿ ಮತ್ತು ಎಂಸಿಎಚ್‌ಎಸ್ ಬಿ.ಸಿ. ತಂಡಗಳು ರಾಜ್ಯ 13 ವರ್ಷದೊಳಗಿನವರ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಎಂಟರಘಟ್ಟ ತಲುಪಿದವು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕೋರಮಂಗಲ 58–38ರಿಂದ ಎಸ್. ಬ್ಲ್ಯೂಸ್ ತಂಡವನ್ನು ಸೋಲಿಸಿತು. ವಿಜೇತ ತಂಡದ ಲಕ್ಷ್ಯ ಬಿ. ಮುರಗೋಡ 23 ಪಾಯಿಂಟ್ಸ್ ದಾಖಲಿಸಿದರು. ಓಂ ಕಲ್ಮಾಡಿ 15 ಪಾಯಿಂಟ್ಸ್ ಗಳಿಸಿದರು.

ಬಾಲಕರ ವಿಭಾಗದಲ್ಲಿ ಎಂಸಿಎಚ್‌ಎಸ್ ಬಿಸಿ 54–26ರಿಂದ ಎಂ.ಎನ್.ಕೆ. ರಾವ್ ತಂಡವನ್ನು ಸೋಲಿಸಿತು. ಎಂಸಿಎಚ್‌ಎಸ್‌ನ ಅದಿತಿ 22 ಪಾಯಿಂಟ್ಸ್ ಕಲೆಹಾಕಿದರು.

ಬಾಲಕರ ವಿಭಾಗದ ಇನ್ನುಳಿದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಬೆಂಗಳೂರು ಸ್ಪೋರ್ಟಿಂಗ್ 50–33ರಿಂದ ನ್ಯಾಷನಲ್ಸ್ ಬಿ.ಸಿ. ಮೈಸೂರು ವಿರುದ್ಧ, ಅಪ್ಪಯ್ಯ ಬಿ.ಸಿ. 46–9 ರಿಂದ ಬಿ.ಸಿ ಬಿ.ಸಿ ತಂಡದ ಎದುರು, ಎಂ.ಎನ್.ಕೆ. ರಾವ್ ಪಾರ್ಕ್ 47–8ರಿಂದ ಮೌಂಟ್ಸ್ ಕ್ಲಬ್ ವಿರುದ್ಧ, ಎಚ್.ಬಿ.ಆರ್ ಬಿ.ಸಿ. 64–37ರಿಂದ ಎಂಸಿಎಚ್‌ಎಸ್ ಬಿ.ಸಿ. ವಿರುದ್ಧ, ಭಾರತ್ ಎಸ್.ಯು. 50– 28ರಿಂದ ಹಲಸೂರು ಎಸ್.ಯು. ವಿರುದ್ಧ, ಪಿಪಿಸಿ 47– 31ರಿಂದ ರೋವರ್ಸ್ ವಿರುದ್ಧ ಗೆದ್ದವು.

ಬಾಲಕಿಯರ ವಿಭಾಗದ 16ರ ಘಟ್ಟದ ಇನ್ನುಳಿದ ಪಂದ್ಯಗಳಲ್ಲಿ ಮಲ್ಲಸಜ್ಜನ ಬಿ.ಸಿ. ಧಾರವಾಡ 30–26ರಿಂದ ಬೆಂಗಳೂರು ಸ್ಪೋರ್ಟಿಂಗ್ ಎದುರು, ಅಪ್ಪಯ್ಯ ಬಿ.ಸಿ. 43–12ರಿಂದ ರೋವರ್ಸ್ ಧಾರವಾಡ ಎದುರು, ಡಿವೈಇಎಸ್ ಮಂಡ್ಯ 45–4ರಿಂದ ಬಿ.ಸಿ ಬಿ.ಸಿ ವಿರುದ್ಧ, ಕೋರಮಂಗಲ ಎಸ್‌ಸಿ 44–13ರಿಂದ ಎಚ್‌ಬಿಆರ್ ಬಿ.ಸಿ. ವಿರುದ್ಧ ಜಯ ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.