ಸೋಮವಾರ, ಜೂನ್ 21, 2021
30 °C
ಅಬುಧಾಬಿಯಲ್ಲಿ ಮುಂದಿನ ಡಿಸೆಂಬರ್‌ನಲ್ಲಿ ನಡೆಸಲು ನಿರ್ಧಾರ

ವಿಶ್ವ ಈಜು ಕೂಟ ಮುಂದೂಡಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಲಂಡನ್‌ : ಅಬುಧಾಬಿಯಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ವಿಶ್ವ ಈಜು ಚಾಂಪಿಯನ್‌ಷಿಪ್‌ ಅನ್ನು ಕೋವಿಡ್‌–19 ಸಾಂಕ್ರಾಮಿಕ ಪಿಡುಗಿನ ಕಾರಣ ಮುಂದಿನ ವರ್ಷದ ಡಿಸೆಂಬರ್‌ಗೆ ಮುಂದೂಡಲಾಗಿದೆ ಎಂದು ವಿಶ್ವ ಈಜು ಸಂಸ್ಥೆ (ಫಿನಾ) ಗುರುವಾರ ತಿಳಿಸಿದೆ.

ಈ ಕೂಟ 2021ರ ಡಿಸೆಂಬರ್‌ 13 ರಿಂದ 18 ರವರೆಗೆ ಅಬುಧಾಬಿಯಲ್ಲೇ ನಡೆಯಲಿದೆ ಎಂದು ಫಿನಾ ಹೇಳಿಕೆಯಲ್ಲಿ ತಿಳಿಸಿದೆ.

ಫಿನಾ ಈ ಹಿಂದೆ 2021ರ ಮೇ 13 ರಿಂದ 29ರವರೆಗೆ ಜಪಾನ್‌ನ ಫುಕುವೊಕಾದಲ್ಲಿ ನಿಗದಿಯಾಗಿದ್ದ ವಿಶ್ವ ಈಜು ಕೂಟವನ್ನು ಮುಂದೂಡಿತ್ತು. ಟೋಕಿಯೊ ಒಲಿಂಪಿಕ್‌ ಕೂಟ ಹತ್ತಿರವಿದ್ದ ಕಾರಣ ಈ ನಿರ್ಧಾರಕ್ಕೆ ಬಂದಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು