ಗುರುವಾರ , ಅಕ್ಟೋಬರ್ 28, 2021
18 °C
ರಾಜ್ಯ ಈಜು ಚಾಂಪಿಯನ್‌ಷಿಪ್‌: ಶಿವ, ಶೋನ್ ಗಂಗೂಲಿ ಮಿಂಚು

ಎರಡು ದಾಖಲೆ ಬರೆದ ರಿಧಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಈಜುಕೊಳದಲ್ಲಿ ಮಿನುಗಿದ ಬಸವನಗುಡಿ ಈಜು ಕೇಂದ್ರದ ರಿಧಿಮಾ ವೀರೇಂದ್ರ ಕುಮಾರ್ ಅವರು ರಾಜ್ಯ ಈಜು ಸಂಸ್ಥೆ ಆಯೋಜಿಸಿರುವ ಈಜು ಚಾಂಪಿಯನ್‌ಷಿಪ್‌ನ ನಾಲ್ಕನೇ ದಿನವಾದ ಭಾನುವಾರ ಎರಡು ಕೂಟ ದಾಖಲೆ ಬರೆದರು.

ಇಲ್ಲಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಗುಂಪು ಎರಡರ ಬಾಲಕಿಯರ 50 ಮೀ. ಫ್ರೀಸ್ಟೈಲ್‌ನಲ್ಲಿ (28.14 ಸೆಕೆಂಡು) ಮತ್ತು 50 ಮೀ. ಬ್ಯಾಕ್‌ಸ್ಟ್ರೋಕ್‌ (30.6 ಸೆ) ವಿಭಾಗದಲ್ಲಿ ಕೂಟ ದಾಖಲೆಗಳೊಂದಿಗೆ ಚಿನ್ನ ಗೆದ್ದರು.

ನಾಲ್ಕನೇ ದಿನದ ಫಲಿತಾಂಶಗಳು: 800 ಮೀ. ಫ್ರೀಸ್ಟೈಲ್‌:ಪುರುಷರು: ಕೌಸ್ತುಭ್ ಅಗರವಾಲ್‌ (ಬಸವನಗುಡಿ ಈಜು ಕೇಂದ್ರ)–1, ಕಾಲ: 8:57.10, ಆರ್ಯನ್ ಭೋಸ್ಲೆ–2, ರಿಷಭ್ ಚೌಬೆ–3 (ಅತಿಥಿ ಈಜುಪಟುಗಳು– ಡಾಲ್ಫಿನ್‌). ಬಾಲಕರ ಗುಂಪು 1: ಅನೀಶ್ ಎಸ್‌. ಗೌಡ (ಬಿಎಸಿ)–1, ಕಾಲ: 8:34.79, ಶಿವಾಂಕ್ ವಿಶ್ವನಾಥ್‌ (ಜಿಎಎಫ್‌ಆರ್‌ಎವೈ)–2, ಅಮೋಘ ವೆಂಕಟೇಶ್ (ಬಿಎಸಿ)–3. ಗುಂಪು 2: ಪವನ್ ಧನಂಜಯ (ಬಿಎಸಿ)–1, ಕಾಲ: 9:03.26, ಅಲಸ್ಟೇರ್ ಸ್ಯಾಮ್ಯುಯೆಲ್‌ ರೆಗೊ–2, ಕ್ರಿಶ್ ಸುಕುಮಾರ್‌–3 (ಇಬ್ಬರೂ ಡಾಲ್ಫಿನ್‌). 200 ಮೀ. ಫ್ರೀಸ್ಟೈಲ್: ಬಾಲಕರ ಗುಂಪು 2: ನವನೀತ್ ಆರ್‌. ಗೌಡ(ಡಾಲ್ಫಿನ್‌)–1, ಕಾಲ: 2:19.66 (ಕೂಟ ದಾಖಲೆ), ಪವನ್ ಧನಂಜಯ (ಬಿಎಸಿ)–2, ಸೂರ್ಯ ಜೋಯಪ್ಪ (ಬಿಎಸಿ)–3. ಗುಂಪು 1: ಶೋನ್ ಗಂಗೂಲಿ (ಬಿಎಸಿ)–1, ಕಾಲ: 2:09.30 (ಕೂಟ ದಾಖಲೆ), ಕಲ್ಪ್ ಬೊಹ್ರಾ (ಬಿಎಸಿ)–2, ವಿದಿತ್ ಶಂಕರ್‌ (ಡಾಲ್ಫಿನ್)–3. 200 ಮೀ. ಮೆಡ್ಲೆ: ಪುರುಷರು: ಶಿವ ಎಸ್‌.–1, ಕಾಲ: 2:07.61 (ಕೂಟ ದಾಖಲೆ), ರಾಜ್‌ ವಿನಾಯಕ್ ರೆಲೆಕರ್ –2, ಕೌಸ್ತುಭ್ ಅಗರವಾಲ್‌–3 (ಎಲ್ಲರೂ ಬಿಎಸಿ). 50 ಮೀ. ಫ್ರೀಸ್ಟೈಲ್: ಬಾಲಕರ ಗುಂಪು 2: ಚಿಂತನ್ ಶೆಟ್ಟಿ (ಮಂಗಲಾ ಸ್ವಿಮಿಂಗ್ ಕ್ಲಬ್‌)–1, ಕಾಲ:26.90, ವಿಸ್ತ್ರುತ್‌ ಮೆಹರೊತ್ರಾ(ಜೀ ಸ್ವಿಮ್‌)–2, ಸುಯೋಗ್‌ ಗೌಡ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3. ಗುಂಪು 1: ಸಂಭವ್ ಆರ್‌. (ಬಿಎಸ್ಆರ್‌ಸಿ)–1, ಕಾಲ: 23.73 (ಕೂಟ ದಾಖಲೆ), ಸಾಯಿ ಸಮರ್ಥ್‌ ಎನ್‌.ವಿ. (ವಿಜಯನಗರ)–2, ಸಂಜೀತ್ ಎಲ್. (ಬಿಎಸಿ)–3. ಪುರುಷರು: ಪೃಥ್ವಿ ಎಂ. (ಬಿಎಸಿ)–1, ಕಾಲ: 24.51, ಆದಿತ್ಯ ಭಂಡಾರಿ (ಜೈ ಹಿಂದ್, ಮಂಗಳೂರು)–2, ಪೃಥ್ವಿಕ್‌ ಡಿ.ಎಸ್‌. (ಬಿಎಸಿ)–3. 50 ಮೀ. ಬ್ಯಾಕ್‌ಸ್ಟ್ರೋಕ್‌: ಬಾಲಕರ ಗುಂಪು
2: ಅನಂತಜೀತ್ ಮುಖರ್ಜಿ (ಬಿಎಸ್‌ಆರ್‌ಸಿ)–1, ಕಾಲ: 31.96, ಸಾತ್ವಿಕ್ ಪ್ರಸನ್ನ (ಎನ್‌ಎಸಿ)–2, ಡೈಲಾನ್ ವ್ಯಾಸ್‌ ಸ್ಲೆಜಾರ್‌ (ಮಂಗಲಾ)–3. ಗುಂಪು 1: ಉತ್ಕರ್ಷ್ ಪಾಟೀಲ್ (ಬಿಎಸಿ)–1, ಕಾಲ: 27.45, ನಯನ್ ವಿಘ್ನೇಶ್‌ (ಎನ್ಎಸಿ)–2, ಗ್ರುಥನ್ ವಿ. (ವಿಜಯನಗರ)–3. ಪುರುಷರು: ಶ್ರೀಹರಿ ನಟರಾಜ್‌ (ಡಾಲ್ಫಿನ್‌)–1, ಕಾಲ: 25.91, ಭವೇಶ್ ಆರ್‌–2, ಜತಿನ್‌ ಬಿ.–3 (ಇಬ್ಬರೂ ಬಿಎಸ್‌ಆರ್‌ಸಿ). 4X100 ಮೀ. ಫ್ರೀಸ್ಟೈಲ್‌: ಬಾಲಕರ ಗುಂಪು 2: ಡಾಲ್ಫಿನ್ ತಂಡ ‘ಎ‘ –1, ಕಾಲ: 3:59.31, ಬಿಎಸಿ ‘ಎ’–2, ಡಾಲ್ಫಿನ್‌ ‘ಬಿ’–3.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು