ಶುಕ್ರವಾರ, ಏಪ್ರಿಲ್ 16, 2021
31 °C
ಥಾಯ್ಲೆಂಡ್‌ ಓಪನ್‌ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿ

ಬಾಕ್ಸಿಂಗ್‌: ಎಂಟರ ಘಟ್ಟಕ್ಕೆ ದೀಪಕ್‌, ಮನೀಷಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಮಿಂಚಿನ ಪಂಚ್‌ ನೀಡಿದ ದೀಪಕ್‌ ಸಿಂಗ್‌ (49 ಕೆಜಿ) ಸೇರಿದಂತೆ ಭಾರತದ ಮೂವರು ಬಾಕ್ಸರ್‌ಗಳು ಸೋಮವಾರ ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಟೂರ್ನಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಡೆಯುತ್ತಿದೆ.

ಮನೀಷಾ ಮೌನ್‌ (57 ಕೆಜಿ) ಹಾಗೂ ಆಶಿಶ್‌ ಕುಮಾರ್‌ (75 ಕೆಜಿ) ಎಂಟರಘಟ್ಟ ತಲುಪಿದ ಭಾರತದ ಇನ್ನಿಬ್ಬರು ಬಾಕ್ಸರ್‌ಗಳು.

ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯ ದಲ್ಲಿ ದೀಪಕ್ ಅವರು ಮೊರೊಕ್ಕೊದ ಸೈದ್‌ ಮೊರ್ತಾಜಿ ವಿರುದ್ಧ 5–0 ಪಾಯಿಂಟ್‌ಗಳಿಂದ ಗೆದ್ದರು. ಮನೀಷಾ ಮೌನ್‌ ಅವರು ಥಾಯ್ಲೆಂಡ್‌ನ ಸಜೀವನಿ ಶ್ರೀಮಾಲಿ ವಿರುದ್ಧ 5–0 ಅಂತರದ ಜಯ ಗಳಿಸಿದರು.‌

ಮತ್ತೊಂದು ಪಂದ್ಯದಲ್ಲಿ ಆಶಿಶ್‌, ಒಂದಷ್ಟು ಪ್ರತಿರೋಧ ಎದುರಿಸಿದರೂ ಸ್ಥಳೀಯ ಎದುರಾಳಿ ಅಪಿಶಿತ್‌ ಕನಂಕೊಕ್ರುವಾ ವಿರುದ್ಧ 4–1ರಿಂದ ಗೆದ್ದು ಮುನ್ನಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು