ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಸೆಮಿ ತಲುಪಿದ ಅಮೆರಿಕ

Last Updated 3 ಆಗಸ್ಟ್ 2021, 13:53 IST
ಅಕ್ಷರ ಗಾತ್ರ

ಸಾಯ್‌ತಮ: ಅಮೆರಿಕ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸನ್ನು ಬಲಪಡಿಸಿಕೊಂಡಿದೆ.

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಮೆರಿಕ 95–81 ಪಾಯಿಂಟ್ಸ್‌ನಿಂದ ವಿಶ್ವ ಚಾಂಪಿಯನ್‌ ಸ್ಪೇನ್‌ ತಂಡವನ್ನು ಪರಾಭವಗೊಳಿಸಿತು.

ಮೊದಲ ಕ್ವಾರ್ಟರ್‌ನಲ್ಲಿ ಸ್ಪೇನ್‌ 21–19ರಿಂದ ಮುನ್ನಡೆ ಹೊಂದಿತ್ತು. ನಂತರ ಅಮೆರಿಕದ ಆಟಗಾರರು ಪ್ರಾಬಲ್ಯ ಮೆರೆದರು. ಈ ತಂಡದ ಕೆವಿನ್‌ ಡ್ಯುರಾಂಟ್‌ ಒಟ್ಟು 29 ಪಾಯಿಂಟ್ಸ್‌ ಕಲೆಹಾಕಿ ಗಮನಸೆಳೆದರು. ಜೇಸನ್‌ ಟಾಟಮ್‌ 13 ಪಾಯಿಂಟ್ಸ್‌ ಗಳಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಲು ನೆರವಾದರು.

ಸ್ಪೇನ್‌ ತಂಡದ ರಿಕಿ ರುಬಿಯೊ 38 ಪಾಯಿಂಟ್ಸ್‌ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.

ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಲೊವೇನಿಯಾ ತಂಡ ಜರ್ಮನಿಗೆ ಆಘಾತ ನೀಡಿತು.

ಸ್ಲೊವೇನಿಯಾ 94–70 ಪಾಯಿಂಟ್ಸ್‌ನಿಂದ ಎದುರಾಳಿ ತಂಡವನ್ನು ಮಣಿಸಿತು. ಈ ತಂಡದ ಜೊರಾನ್‌ ಡ್ರಾಗಿಕ್‌ 27 ಮತ್ತು ಲುಕಾ ಡೊಂಕಿಚ್‌ 20 ಪಾಯಿಂಟ್ಸ್‌ ಕಲೆಹಾಕಿದರು.

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಸ್ಲೊವೇನಿಯಾ ತಂಡವು ಬಲಿಷ್ಠ ಫ್ರಾನ್ಸ್‌ ವಿರುದ್ಧ ಸೆಣಸಲಿದೆ.

ಎಂಟರ ಘಟ್ಟದ ಇನ್ನೊಂದು ಹೋರಾಟದಲ್ಲಿ ಫ್ರಾನ್ಸ್‌ 84–75ರಿಂದ ಇಟಲಿ ವಿರುದ್ಧ ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT