ಮಂಗಳವಾರ, ಸೆಪ್ಟೆಂಬರ್ 21, 2021
28 °C

ಜಿಮ್ನಾಸ್ಟಿಕ್ಸ್: ಚಿನ್ನಕ್ಕೆ ಮುತ್ತಿಟ್ಟ ಇಸ್ರೇಲ್‌ನ ಡೊಲ್ಗೊಪ್ಯಾಟ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಆರ್ಟೆಮ್ ಡೊಲ್ಗೊಪ್ಯಾಟ್‌ ಅವರು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಭಾಗದಲ್ಲಿ ಇಸ್ರೇಲ್‌ಗೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು. ಭಾನುವಾರ ನಡೆದ ಪುರುಷರ ವೈಯಕ್ತಿಕ ಫ್ಲೋರ್‌ ಎಕ್ಸರ್‌ಸೈಜ್ ವಿಭಾಗದ ಫೈನಲ್‌ನಲ್ಲಿ ಸ್ಪೇನ್‌ನ ರೇಡೆರ್ಲಿ ಜಪಾಟ ಅವರನ್ನು ಕೂದಲೆಳೆ ಅಂತರದಿಂದ ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದರು.

ಪ್ರಶಸ್ತಿ ಸುತ್ತಿನ ಸ್ಪರ್ಧೆಯಲ್ಲಿ ಡೊಲ್ಗೊಪ್ಯಾಟ್‌ ಮತ್ತು ಜಪಾಟ ಇಬ್ಬರೂ ತಲಾ 14.9333 ಪಾಯಿಂಟ್ಸ್ ಕಲೆಹಾಕಿದ್ದರು. ಆದರೆ ಜಪಾಟ ಅವರಿಗಿಂತ ಡೊಲ್ಗೊಪ್ಯಾಟ್ ಅವರು ಸೆಟ್‌ ಸ್ವಲ್ಪ ಕಷ್ಟಕರವಾಗಿತ್ತು. ಹೀಗಾಗಿ ಅವರಿಗೆ ಚಿನ್ನದ ಪದಕ ಒಲಿಯಿತು.

ಒಲಿಂಪಿಕ್ಸ್‌ನಲ್ಲಿ ಇಸ್ರೇಲ್‌ ಗೆದ್ದ ಕೇವಲ ಎರಡನೇ ಚಿನ್ನದ ಪದಕವಿದು. 2004ರ ಅಥೆನ್ಸ್ ಕೂಟದ ಪುರುಷರ ಸೇಲ್‌ಬೋರ್ಡ್‌ ವಿಭಾಗದಲ್ಲಿ ಗಾಲ್ ಫ್ರಿಡ್ಮನ್‌ ಚಿನ್ನ ಗೆದ್ದುಕೊಂಡಿದ್ದರು.

ಚೀನಾದ ಕ್ಷಿಯಾವೊ ರೂಟಾಂಗ್‌ ಕಂಚಿನ ಪದಕ ಪದಕ ತಮ್ಮದಾಗಿಸಿಕೊಂಡರು. ಟೋಕಿಯೊ ಕ್ರೀಡಾಕೂಟದಲ್ಲಿ ಇದು ಅವರಿಗೆ ಮೂರನೇ ಪದಕ. ಪುರುಷರ ಆಲ್ ಅರೌಂಡ್‌ ವಿಭಾಗದಲ್ಲಿ ಬೆಳ್ಳಿ ಹಾಗೂ ತಂಡ ವಿಭಾಗದಲ್ಲಿ ಕಂಚಿನ ಪದಕವನ್ನು ಅವರು ಗೆದ್ದಿದ್ದರು.

ಚಿನ್ನ ಗೆದ್ದ ರೆಬೆಕಾ: ಮಹಿಳೆಯರ ವಾಲ್ಟ್ ವಿಭಾಗದ ಚಿನ್ನದ ಪದಕವು ಬ್ರೆಜಿಲ್‌ನ ರೆಬೆಕಾ ಆ್ಯಂಡ್ರಾಡೆ ಅವರಿಗೆ ಒಲಿಯಿತು. ಫೈನಲ್ಸ್‌ನಲ್ಲಿ ಅವರು 15.083 ಸ್ಕೋರ್ ಗಳಿಸಿದರು. ಅಮೆರಿಕದ ಮೈಕಾಲ್ಯ ಸ್ಕಿನ್ನರ್‌ (14.916) ಬೆಳ್ಳಿ ಮತ್ತು ದಕ್ಷಿಣ ಕೊರಿಯಾದ ಸಿಜಿಯೊಂಗ್‌ ಯೊ (14.733) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು