ಮಂಗಳವಾರ, ಆಗಸ್ಟ್ 3, 2021
23 °C
ಭಾರತದ ಕನಸಿನ ಪಯಣ

ಟೋಕಿಯೊ ಒಲಿಂಪಿಕ್ಸ್ 2020: ಪದಕಗಳತ್ತ ಯುವ ಶೂಟರ್‌ಗಳ ‘ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಲಿಂಪಿಕ್ಸ್‌ನಲ್ಲಿ ಭಾರತ ಜಯಿಸಿರುವ ಒಟ್ಟು 28 ಪದಕಗಳಲ್ಲಿ ವೈಯಕ್ತಿಕ ಸ್ಪರ್ಧೆಗೆ ಚಿನ್ನದ ಗರಿ ಮೂಡಿದ್ದು ಶೂಟಿಂಗ್‌ ಕ್ರೀಡೆಯಲ್ಲಿ ಮಾತ್ರ. 2008ರಲ್ಲಿ ಅಭಿನವ್‌ ಬಿಂದ್ರಾ ಈ ಸಾಧನೆ ಮಾಡಿದ್ದರು. 2004ರ ಒಲಿಂಪಿಕ್ಸ್‌ನಿಂದ 2012ರ ವರೆಗೆ ಭಾರತದ ಶೂಟರ್‌ಗಳು ಒಂದಲ್ಲ ಒಂದು ಪದಕ ಜಯಿಸಿದ್ದಾರೆ.

ಹೀಗಾಗಿ ಪ್ರತಿ ಒಲಿಂಪಿಕ್ಸ್‌ ಆರಂಭವಾದಾಗ ಶೂಟಿಂಗ್‌ನಲ್ಲಿ ಭಾರತ ಪದಕ ಗೆಲ್ಲುವುದು ನಿಶ್ಚಿತ ಎನ್ನುವ ವಿಶ್ವಾಸ ಮೂಡುತ್ತದೆ. 2016ರಲ್ಲಿ ಬಿಂದ್ರಾ, ಪ್ರಕಾಶ್ ನಂಜಪ್ಪ, ಗಗನ್‌ ನಾರಂಗ್‌, ಜಿತು ರಾಯ್‌ ಹೀಗೆ ಅನುಭವಿ ಶೂಟರ್‌ಗಳು ಪಾಲ್ಗೊಂಡಿದ್ದರು. ಬಿಂದ್ರಾ ಅವರಿಗೆ ಕೂದಲೆಳೆ ಅಂತರದಲ್ಲಿ ಪದಕ ಕೈತಪ್ಪಿತ್ತು. ಆದರೆ, ಟೋಕಿಯೊ ಟಿಕೆಟ್‌ ಪಡೆದವರಲ್ಲಿ ಬಹುತೇಕರಿಗೆ ಒಲಿಂಪಿಕ್ಸ್‌ ವೇದಿಕೆಯಲ್ಲಿ ಮೊದಲ ಅನುಭವ. 19 ವರ್ಷದ ಆಸುಪಾಸಿನಲ್ಲಿರುವ ಯುವಪಡೆಯೇ ಭಾರತದ ಶಕ್ತಿಯಾಗಿದೆ.

ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಉತ್ತರ ಪ್ರದೇಶದ ಸೌರಭ್‌ ಚೌಧರಿ ಎರಡು ವರ್ಷಗಳಿಂದ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. 2019ರಿಂದ ನಾಲ್ಕು ಶೂಟಿಂಗ್‌ ವಿಶ್ವಕಪ್‌ಗಳಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ, ಒಂದು ಬೆಳ್ಳಿ ಮತ್ತು ಒಂದು ಕಂಚು ಜಯಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಮನು ಭಾಕರ್‌ ಕೂಡ ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

2018ರ ಕಾಮನ್‌ವೆಲ್ತ್‌ ಕ್ರೀಡಾಕೂಟದ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 400ಕ್ಕೆ 388 ಅಂಕಗಳನ್ನು ಗಳಿಸಿದ್ದರು. ಇವರಿಬ್ಬರೂ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಾಗಿ ಸ್ಪರ್ಧಿಸಲಿರುವ ಕಾರಣ ಅಲ್ಲಿ ಪದಕ ನಿರೀಕ್ಷೆ ಗರಿಗೆದರಿದೆ.

ಹೋದ ತಿಂಗಳು ನವದೆಹಲಿಯಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದ ದಿವ್ಯಾಂಶ್ ಸಿಂಗ್‌ ಪನ್ವರ್‌ ಮತ್ತು ಇಳವೆನ್ನಿಲ ವಾಳರಿವನ್ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಐಎಸ್‌ಎಸ್‌ಎಫ್‌ 10 ಮೀ. ಏರ್‌ ರೈಫಲ್‌ ವಿಭಾಗದ ರ್‍ಯಾಂಕ್‌ ಪಟ್ಟಿಯಲ್ಲಿ ಇಳವೆನ್ನಿಲ ಅಗ್ರಸ್ಥಾನ ಹೊಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು