ಶನಿವಾರ, ಸೆಪ್ಟೆಂಬರ್ 25, 2021
29 °C

Tokyo Olympics: ಭಾರತದ ಏಕೈಕ ಜಿಮ್ನಾಸ್ಟ್ ಸ್ಪರ್ಧಿ ಪ್ರಣತಿಗಿಲ್ಲ ಫೈನಲ್ ಅರ್ಹತೆ

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ಜಿಮ್ನಾಸ್ಟ್ ಪಟು ಪ್ರಣತಿ ನಾಯಕ್, ಭಾನುವಾರ ಇಲ್ಲಿ ನಡೆದ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಆಲ್ ರೌಂಡ್ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಇದರೊಂದಿಗೆ ಭಾರತದ ಪದಕದ ಆಸೆ ಕಮರಿದೆ. 26 ವರ್ಷದ ಪಶ್ಚಿಮ ಬಂಗಾಳ ಮೂಲದ ಪ್ರಣತಿ, ನಾಲ್ಕು ವಿಭಾಗಗಳಲ್ಲಿ (ಫ್ಲೋರ್ ಎಕ್ಸೈಜ್, ವಾಲ್ಟ್, ಅನ್‌ಇವನ್ ಬಾರ್ಸ್, ಬ್ಯಾಲೆನ್ಸ್ ಬೀಮ್) ಒಟ್ಟು 42.565 ಸ್ಕೋರ್ ಕಲೆ ಹಾಕಿದರು. ಸಬ್‌ಡಿವಿಷನ್ 2ರ ಅಂತ್ಯಕ್ಕೆ ಒಟ್ಟಾರೆಯಾಗಿ 29ನೇ ರ‍್ಯಾಂಕ್ ಗಿಟ್ಟಿಸಿಕೊಂಡರು.

ಇದನ್ನೂ ಓದಿ: 

ಒಟ್ಟು ಐದು ಸಬ್‌ಡಿವಿಷನ್‌ಗಳಿದ್ದು, ಅದರಲ್ಲಿ ಅಗ್ರ 24 ಜಿಮ್ನಾಸ್ಟ್‌ಗಳು (ಎಲ್ಲ 4ರಲ್ಲೂ ಉತ್ತಮ ಸ್ಕೋರ್ ಗಳಿಸಿದವರು) ಜುಲೈ 29ರಂದು ನಡೆಯಲಿರುವ ಆಲ್-ರೌಂಡ್ ಫೈನಲ್ಸ್‌ಗೆ ಅರ್ಹತೆ ಪಡೆದಿದ್ದಾರೆ.

 

 

 

ಪ್ರತಿ ವಿಭಾಗದಲ್ಲಿ ಅಗ್ರ ಎಂಟು ಸ್ಥಾನಗಳನ್ನು ಪಡೆಯಲಿರುವ ಜಿಮ್ನಾಸ್ಟ್‌ಗಳು ಆಗಸ್ಟ್ 1ರಿಂದ 3ರ ವರೆಗೆ ನಡೆಯಲಿರುವ ಆಯಾ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿದ್ದಾರೆ.

 

ಹಾಗಿದ್ದರೂ ಪ್ರಣತಿ ನಾಯಕ್ ಎಲ್ಲ ನಾಲ್ಕು ವಿಭಾಗದಲ್ಲೂ ನಿರಾಸೆ ಮೂಡಿಸಿದರು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಬಳಿಕ ಜಿಮ್ನಾಸ್ಟಿಕ್ಸ್ ಕ್ರೀಡೆಯಲ್ಲಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ಭಾರತದ ಎರಡನೇ ಮಹಿಳಾ ಸ್ಪರ್ಧಿ ಎಂಬ ಹಿರಿಮೆಗೆ ಪ್ರಣತಿ ನಾಯಕ್ ಪಾತ್ರರಾಗಿದ್ದರು.

2019ರಲ್ಲಿ ನಡೆದ ಏಷ್ಯನ್ ಆರ್ಟಿ‌ಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನ ವಾಲ್ಟ್ ವಿಭಾಗದಲ್ಲಿ ಪ್ರಣತಿ ಕಂಚಿನ ಪದಕ ಗೆದ್ದಿದ್ದರು. ಆದರೆ ಈ ಬಾರಿ ಪೂರ್ವ ಸಿದ್ಧತೆಯ ಕೊರತೆಯಿಂದಾಗಿ ಹಿನ್ನೆಡೆ ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು