ಟೋಕಿಯೊ: ಕ್ಯೂಬಾದ ಮಿಜಾಯಿನ್ ಲೊಪೆಜ್ ನ್ಯೂನೆಜ್ ನಿರೀಕ್ಷೆಯಂತೆ ಎದುರಾಳಿಯನ್ನು ಚಿತ್ ಮಾಡಿ ಗ್ರೀಕೊ ರೋಮನ್ ಸೂಪರ್ ಹೆವಿವೇಟ್ ವಿಭಾಗದ ಕುಸ್ತಿಯಲ್ಲಿ ಚಾಂಪಿಯನ್ ಪಟ್ಟ ಧರಿಸಿದರು. ಸೋಮವಾರ 130 ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಅವರು ಜಾರ್ಜಿಯಾದ ಕಜಾಯಿ ಅವರನ್ನು ಮಣಿಸಿ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ದಾಖಲೆ ಬರೆದರು.

ಒಂದೇ ವಿಭಾಗದಲ್ಲಿನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ವಿಶ್ವದ ನಾಲ್ಕನೇ ಅಥ್ಲೀಟ್ ಎಂಬ ಶ್ರೇಯ ಲೊಪೆಜ್ ಅವರದಾಯಿತು. ಇದರೊಂದಿಗೆ ಅವರು ಕಾರ್ಲ್ ಲೆವಿಸ್ (ಲಾಂಗ್ ಜಂಪ್), ಅಲ್ ಓರ್ಟರ್ (ಡಿಸ್ಕಸ್ ಥ್ರೊ), ಮೈಕೆಲ್ ಫೆಲ್ಪ್ಸ್ (ಈಜು, 200 ಮೀ. ಮೆಡ್ಲೆ) ಅವರ ಸಾಲಿಗೆ ಸೇರಿದರು.

ಮಖುಹಾರಿ ಮೆಸ್ಸೆ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಹಣಾಹಣಿಯಲ್ಲಿ ಲೊಪೆಜ್ 5–0ಯಿಂದ ಎದುರಾಳಿಗೆ ಸೋಲುಣಿಸಿದರು.

ಟರ್ಕಿಯ ರಿಜಾ ಕಯಾಲ್ಪ್ ಮತ್ತು ರಷ್ಯಾದ ಸೆರ್ಜಿ ಸೆಮೊನೊಯ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಲೊಪೆಜ್ ಅವರು 2008ರ ಬೀಜಿಂಗ್, 2012ರ ಲಂಡನ್ ಮತ್ತು 2016ರ ರಿಯೊ ಕೂಟಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಇಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಾಂಪಿಯನ್ ಆದ ಮೊದಲ ಪುರುಷ ಕುಸ್ತಿಪಟು ಎಂಬ ಶ್ರೇಯವೂ ಅವರದಾಯಿತು. ಜಪಾನ್‌ನ ಫ್ರೀಸ್ಟೈಲ್ ಕುಸ್ತಿಪಟು ಕವೊರಿ ಇಚೊ ಅವರು ವೈಯಕ್ತಿಕ ವಿಭಾಗದಲ್ಲಿ ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಒರ್ಟಾಗೆ ಬ್ಯಾಂಟಮ್‌ವೇಟ್ ಚಿನ್ನ: ಗ್ರೀಕೊ ರೋಮನ್ ಬ್ಯಾಂಟಮ್‌ವೇಟ್‌ದ (60 ಕೆಜಿ ವಿಭಾಗ) ಚಿನ್ನವೂ ಕ್ಯೂಬಾ ದೇಶದ ಪಾಲಾಯಿತು. ಫೈನಲ್ ಹಣಾಹಣಿಯಲ್ಲಿ ಆ ದೇಶದ ಲೂಯಿಸ್ ಒರ್ಟಾ ಅವರು 5–1ರಿಂದ ಜಪಾನ್‌ನ ಕೆನಿಚಿರೊ ಫ್ಯುಮಿಟಾ ಅವರನ್ನು ಮಣಿಸಿದರು.

ಚೀನಾದ ವಾಲಿಹನ್ ಸೈಲಿಕೆ ಮತ್ತು ರಷ್ಯಾದ ಸೆರ್ಜೆ ಎಮೆಲಿನ್ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.