Tokyo Olympics | ಟಿಟಿಯಲ್ಲಿ ರೋಚಕ ಗೆಲುವು ದಾಖಲಿಸಿದ ಮಣಿಕಾ 3ನೇ ಸುತ್ತಿಗೆ

ಟೋಕಿಯೊ: ಅಮೋಘ ಪ್ರದರ್ಶನ ನೀಡಿರುವ ಭಾರತದ ಮಣಿಕಾ ಬಾತ್ರಾ, ಟೇಬಲ್ ಟೆನಿಸ್ ಮಹಿಳೆಯರ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಎರಡನೇ ಸುತ್ತಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಮಣಿಕಾ ಅವರು ವಿಶ್ವ ನಂ. 32 ರ‍್ಯಾಂಕ್‌ನ ಉಕ್ರೇನ್‌ನ ಮಾರ್ಗರೀಟಾ ಪೆಸೋಸ್ಕಾ ವಿರುದ್ಧ 4-11, 4-11, 11-7, 12-10, 8-11, 11-5, 11-7ರಿಂದ ರೋಚಕ ಗೆಲುವು ದಾಖಲಿಸಿದರು.
ಇದನ್ನೂ ಓದಿ: Tokyo Olympics | ಪ್ರಿ-ಕ್ವಾರ್ಟರ್ಗೆ ಪ್ರವೇಶಿಸಿದ ಮೇರಿ ಕೋಮ್
.@manikabatra_TT secures victory against higher-ranked Ukraine's Pestoska in a thrilling 7-setter in her 2nd round singles #tableTennis match.
We wish her all the best for the next round!#Cheer4India pic.twitter.com/UhLZ4Fk65l
— SAIMedia (@Media_SAI) July 25, 2021
ವಿಶ್ವದ 62 ರ‍್ಯಾಂಕ್‌ನ ಮಣಿಕಾ ಮೊದಲೆರಡು ಸೆಟ್ ಕಳೆದುಕೊಂಡು ಹಿನ್ನೆಡೆ ಅನುಭವಿಸಿದರೂ ಬಳಿಕದ ಎರಡು ಸೆಟ್ ಗೆದ್ದು ತಿರುಗೇಟು ನೀಡಿದರು. ಅಂತಿಮವಾಗಿ ಏಳು ಸೆಟ್ ವರೆಗೂ ಸಾಗಿದ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾದರು.
ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಣಿಕಾ, ಬ್ರಿಟನ್ ಆಟಗಾರ್ತಿ ಟಿನ್ ಟಿನ್ ಹೊ ವಿರುದ್ಧ ನಿರಾಯಾಸವಾಗಿ ಜಯ ಗಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.