ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics | ವಿಶ್ವದ ಅಗ್ರ ಬಿಲ್ಲುಗಾರ ಬ್ರಾಡಿಗೆ ಮಣಿದ ಜಾಧವ್ ನಿರ್ಗಮನ

ಅಕ್ಷರ ಗಾತ್ರ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿಶ್ವದ ನಂ.2 ಬಿಲ್ಲುಗಾರನನ್ನು ಮಣಿಸಿದ ಭಾರತದ ಪ್ರವೀಣ್ ಜಾಧವ್, ಮುಂದಿನ ಹಂತದಲ್ಲಿ ವಿಶ್ವದ ಅಗ್ರ ಬಿಲ್ಲುಗಾರನ ಎದುರು ಸೋಲು ಅನುಭವಿಸುವ ಮೂಲಕ ತಮ್ಮ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ಆರ್ಚರಿ ಪುರುಷರ ವೈಯಕ್ತಿಕ ವಿಭಾಗದ 1/32 ಎಲಿಮಿನೇಷನ್ಸ್ ಸುತ್ತಿನಲ್ಲಿ ಕೊರಿಯಾದ ವಿಶ್ವ ನಂ.2 ರ‍್ಯಾಂಕ್‌ನ ಗಾಲ್ಸನ್ ಬಜಾರ್ಜಪೋವ್ ವಿರುದ್ಧ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ 6-0ರಿಂದ ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸಿ ಜಾಧವ್ 16ರ ಸುತ್ತಿಗೆ ಲಗ್ಗೆಯಿಟ್ಟರು.

ಆದರೆ 1/16 ಎಲಿಮಿನೇಷನ್ಸ್ ಸುತ್ತಿನಲ್ಲೂ ಜಾಧವ್‌ಗೆ ಮತ್ತೊಂದು ಕಠಿಣ ಸವಾಲು ಎದುರಾಗಿತ್ತು. ವಿಶ್ವ ನಂ.1 ರ‍್ಯಾಂಕ್‌ನ ಅಮೆರಿಕದ ಬ್ರಾಡಿ ಎಲ್ಲಿಸನ್ ವಿರುದ್ಧ ಮತ್ತದೇ ಗರಿಷ್ಠ ಮಟ್ಟದ ನಿರ್ವಹಣೆ ನೀಡಲು ಸಾಧ್ಯವಾಗಲಿಲ್ಲ. ಪರಿಣಾಮ 0-6ರ ಅಂತರದಲ್ಲಿ ಪರಾಭವಗೊಂಡರು.

ತಂಡ ವಿಭಾಗದಲ್ಲಿ ಪ್ರಭಾವಿ ಎನಿಸಿರುವ 25 ವರ್ಷದ ಪ್ರವೀಣ್, ವೈಯಕ್ತಿಕ ವಿಭಾಗದಲ್ಲೂ ದೇಶದ ಭರವಸೆಯಾಗಿದ್ದರು. ಆದರೆ ಎಲಿಮಿನೇಷನ್ಸ್ ಹಂತದಲ್ಲೇ ಅಗ್ರ ಬಿಲ್ಲುಗಾರರಿಂದ ಕಠಿಣ ಪೈಪೋಟಿ ಎದುರಾಗಿರುವುದು ಹಿನ್ನೆಡೆಗೆ ಕಾರಣವಾಯಿತು. ಇದರಿಂದಾಗಿ ಪದಕದ ಆಸೆ ಕಮರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT