ಬುಧವಾರ, ಸೆಪ್ಟೆಂಬರ್ 22, 2021
24 °C

Tokyo Olympics | ರೋಯಿಂಗ್‌ನಲ್ಲಿ ಛಾಪು ಮೂಡಿಸಿದ ಭಾರತಕ್ಕೆ 11ನೇ ಸ್ಥಾನ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ರೋಯಿಂಗ್ ಫೈನಲ್ ರೇಸ್‌ನಿಂದ ಆಗಲೇ ಹೊರಬಿದ್ದಿರುವ ಭಾರತದ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್‌ ಹಾಗೂ ಅರವಿಂದ್ ಸಿಂಗ್ ಜೋಡಿಯು, 11ನೇ ಸ್ಥಾನ ಪಡೆಯಿತು.

ಹಾಗಿದ್ದರೂ ಒಲಿಂಪಿಕ್ಸ್ ರೋಯಿಂಗ್ ಇತಿಹಾಸದಲ್ಲಿ ಭಾರತದಿಂದ ದಾಖಲಾದ ಅತ್ಯುತ್ತಮ ಸಾಧನೆ ಇದಾಗಿದೆ. ಈ ಮೂಲಕ ಭಾರತದ ಸ್ಪರ್ಧಿಗಳು ಛಾಪು ಮೂಡಿಸಿದ್ದಾರೆ. 

ಇದನ್ನೂ ಓದಿ: 

 

 

 

ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ ಭಾರತ ಜೋಡಿಯು 6 ನಿಮಿಷ 29.66 ಸೆಕೆಂಡುಗಳಲ್ಲಿ ಗುರಿ ತಲುಪಿತು. ಅಲ್ಲದೆ ದೇಶದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

 

ಸೀ ಫಾರೆಸ್ಟ್ ವಾಟರ್‌ವೇನಲ್ಲಿ ನಡೆದ ಸ್ಪರ್ಧೆಯಲ್ಲಿ ಐರ್ಲೆಂಡ್, ಜರ್ಮನಿ ಹಾಗೂ ಇಟಲಿಯ ಸ್ಪರ್ಧಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು