ಟೋಕಿಯೊ: ಮಿಶ್ರಏರ್ ರೈಫಲ್ ಶೂಟಿಂಗ್ ಹಾಗೂ ಬ್ಯಾಡ್ಮಿಂಟನ್ನ ಪುರುಷರ ಡಬಲ್ಸ್ನಲ್ಲಿ ಭಾರತಕ್ಕೆ ನಿರಾಸೆ ಉಂಟಾಗಿದೆ. ಪದಕದ ಭರವಸೆ ಮೂಡಿಸಿದ್ದ ಈ ಎರಡು ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸೋಲು ಕಂಡಿದ್ದಾರೆ.

ಮಿಶ್ರ ಶೂಟಿಂಗ್ 10 ಮೀಟರ್ ಏರ್ ರೈಫಲ್ ವಿಭಾಗದ ಅರ್ಹತಾ ಸುತ್ತಿನಲ್ಲಿಇಳವೆನ್ನಿಲ ವಾಳರಿವನ್, ದಿವ್ಯಾಂಶು ಸಿಂಗ್ ಹಾಗೂ ದೀಪಕ್ ಕುಮಾರ್, ಅಂಜುಮ್ ಮೌದ್ಗಿಲ್ ಅವರು ಎರಡನೇ ಹಂತ ಪ್ರವೇಶಿಸಲು ವಿಫಲರಾದರು. ಪದಕದ ಭರವಸೆ ಮೂಡಿಸಿದ್ದ ಈ ಜೋಡಿಗಳು ಅರ್ಹತಾ ಸುತ್ತಿನಲ್ಲಿ ಎಡವಿದರು.

ಒಲಿಂಪಿಕ್ಸ್ ಬ್ಯಾಡ್ಮಿಂಟನ್ನ ಪುರುಷರ ಡಬಲ್ಸ್ ವಿಭಾಗದ ಮೂರನೇಪಂದ್ಯದಲ್ಲಿ ಚಿರಾಗ್–ಸಾತ್ವಿಕ್ಇಂಗ್ಲೆಂಡ್ನ ಬೆನ್ ಲೇನ್ ಮತ್ತು ಸೀನ್ ವೆಂಡಿ ವಿರುದ್ಧ ಗೆಲುವು ದಾಖಲಿಸಿದರೂ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. ನಿನ್ನೆ ಈ ಜೋಡಿ ಇಂಡೋನೆಷ್ಯಾ ವಿರುದ್ಧ ಸೋಲು ಕಂಡಿತ್ತು.

ಭಾರತದ ಭರವಸೆಯಾಗಿರುವ ಅನುಭವಿ ಟೇಬಲ್ ಟೆನಿಸ್ (ಟಿ.ಟಿ)ಪಟು ಶರತ್ ಕಮಲ್, ಮೂರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಶರತ್ ಅವರು ರಿಯೋ ಒಲಿಂಪಿಕ್ಸ್ ಚಾಂಪಿಯನ್ ಮಾ ಲಾಂಗ್ ಎದುರು7-11 11-8 11-13 4-11 4-11 ನೇರ ಸೆಟ್ಗಳಿಂದ ಸೋತರು. ಆ ಮೂಲಕ ಅವರ ಸಿಂಗಲ್ಸ್ ಹೋರಾಟ ಕೊನೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.