ಶನಿವಾರ, ಸೆಪ್ಟೆಂಬರ್ 25, 2021
26 °C

Tokyo Olympics: ಚೀನಾದ ಜಾಂಗ್‌ಗೆ ಶೂಟಿಂಗ್‌ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಚೀನಾದ ಜಾಂಗ್‌ ಚಾಂಗೊಂಗ್‌ ಅವರು ಪುರುಷರ 50 ಮೀಟರ್ಸ್‌ ರೈಫಲ್‌ 3 ಪೊಷಿಸನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.

ಸೋಮವಾರ ನಡೆದ ಫೈನಲ್‌ನಲ್ಲಿ ಅವರು 466.0 ಪಾಯಿಂಟ್ಸ್‌ ಕಲೆಹಾಕಿ ಒಲಿಂಪಿಕ್ಸ್‌ ದಾಖಲೆ ಸರಿಗಟ್ಟಿದರು.

ರಷ್ಯಾ ಒಲಿಂಪಿಕ್‌ ಸಮಿತಿಯ ಸರ್ಜಿ ಕಮೆನ್‌ಸ್ಕಿ ಬೆಳ್ಳಿ ಪಡೆದರು. ಅವರು 464.2 ಪಾಯಿಂಟ್ಸ್‌ ಗಳಿಸಿದರು. ಸರ್ಬಿಯಾದ ಸೆಬಿಚ್‌ ಮಿಲೆಂಕೊ (448.2) ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಭಾರತದ ಸ್ಪರ್ಧಿಗಳ ವೈಫಲ್ಯ: ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ ಮತ್ತು ಸಂಜೀವ್‌ ರಾಜಪೂತ್‌ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ತೋಮರ್‌ 21ನೇ ಸ್ಥಾನ ಗಳಿಸಿದರೆ, ರಾಜಪೂತ್‌ 32ನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.

ಹೀಗಾಗಿ ಈ ಬಾರಿ ಶೂಟಿಂಗ್‌ನಲ್ಲಿ ಭಾರತಕ್ಕೆ ಪದಕ ಮರೀಚಿಕೆಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು