ಶನಿವಾರ, ಸೆಪ್ಟೆಂಬರ್ 18, 2021
30 °C

Tokyo Olympics| ಒಲಿಂಪಿಕ್ಸ್‌ಗೆ ವರ್ಣರಂಜಿತ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ಪಿಟಿಐ): ಕೋವಿಡ್ ಕಾಲ ಘಟ್ಟದ ಸವಾಲುಗಳನ್ನು ಎದುರಿಸುವ ಗಟ್ಟಿ ವಿಶ್ವಾಸದೊಂದಿಗೆ ಶುಕ್ರವಾರ ಟೋಕಿಯೊ ಒಲಿಂಪಿಕ್ –2020 ಉದ್ಘಾಟನೆಯಾಯಿತು.

ಆತಿಥೇಯ ದೇಶದ ಟೆನಿಸ್ ತಾರೆ ನವೊಮಿ ಒಸಾಕಾ ಅವರು ಕ್ರೀಡಾಜ್ಯೋತಿಯನ್ನು ಪ್ರಜ್ವಲಿಸಿದರು. ಜಪಾನಿನ
ಚಕ್ರವರ್ತಿ ನರುಹಿಟೊ ಕೂಟವನ್ನು ಉದ್ಘಾಟಿಸಿದರು.

ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಪಾನ್‌ ದೇಶದ ಅಭಿವೃದ್ಧಿಯ ಕಥೆ ಹೇಳುವ ರೂಪಕಗಳು ಪ್ರದರ್ಶನಗೊಂಡವು. ಈ ಸಂದರ್ಭದಲ್ಲಿ ನಡೆದ ತಂಡಗಳ ಪಥಸಂಚಲನದಲ್ಲಿ ಭಾರತ ತಂಡದ 19 ಅಥ್ಲೀಟ್‌ಗಳು ಭಾಗವಹಿಸಿದ್ದರು.  ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸಿಂಗ್ ತಾರೆ ಮೇರಿ ಕೋಮ್ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸಿದರು.

ಭಾರತ ತಂಡದಲ್ಲಿ 228 ಸದಸ್ಯರಿ ದ್ದಾರೆ. ಅದರಲ್ಲಿ 120 ಕ್ರೀಡಾಪಟುಗಳು ಇದ್ದಾರೆ. ಕೂಟವು ಆಗಸ್ಟ್ 8ರಂದು ಮುಕ್ತಾಯವಾಗಲಿದೆ. ಹೋದ ವರ್ಷದ ಜುಲೈನಲ್ಲಿ ಆಯೋಜನೆಗೊಳ್ಳಬೇಕಿದ್ದ ಟೂರ್ನಿಯನ್ನು ಕೋವಿಡ್‌ ಪಿಡುಗಿನ ಕಾರಣ ಮುಂದೂಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು